ಮೈಸೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎಸ್ಐಟಿ ತಂಡ ರಚನೆಯಾದ ಬೆನ್ನಲ್ಲೇ ಕೇಸ್ನ ತನಿಖೆ ಇನ್ನಷ್ಟು ವೇಗವಾಗಿದ್ದು,
Advertisement
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೇ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನೇ ಹೆಣಗಳನ್ನು ಹೂತಿಟ್ಟಿದ್ದೇನೆ ಅಂತಿರೋ ಈ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ ಎಂದು ಆರೋಪಿಸಿದ್ದಾರೆ.
ಇದು ಯಾರೋ ಕಾಣದ ಕೈಗಳು ಮಾಡಿರೋ ಕೆಲ್ಸ. ಈ ಕೇಸ್ ಜಟಿಲ ಆಗ್ತಿಲ್ಲ, ಜಟಿಲ ಮಾಡ್ತಿದ್ದಾರೆ. ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ ಇದೆ. ಇಲ್ಲಿ ಆತ್ಮಹತ್ಯೆ ಆಗಿದೆಯೋ? ಕೊಲೆ ಆಗಿದೆಯೋ? ಎಂದು ಪತ್ತೆ ಹಚ್ಚಲು ಪ್ರಕರಣವನ್ನು ಎಸ್ಐಟಿ ಗೆ ವರ್ಗಾವಣೆ ಮಾಡಿದ್ದಾರೆ ನಾನು ಇದನ್ನು ಸ್ವಾಗತ ಮಾಡ್ತೀನಿ. ಧರ್ಮಸ್ಥಳದವರು ಕೂಡ ಇದನ್ನು ಸ್ವಾಗತ ಮಾಡಿದ್ದಾರೆ ಎಂದು ಹೇಳಿದ್ದಾರೆ.