ಧರ್ಮಸ್ಥಳ ಪ್ರಕರಣ: ಎಡಪಂಥೀಯರಿಂದಲೇ ಶ್ರೀ ಕ್ಷೇತ್ರ ಹಾಳು ಮಾಡುವ ಪ್ರಯತ್ನ; ಆರ್. ಅಶೋಕ್ ಕಿಡಿ

0
Spread the love

ಬೆಂಗಳೂರು: ಎಡಪಂಥೀಯರಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ವೀಪಕ್ಷ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಎಡಪಂಥೀಯರು  ಸೇರಿ ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಮಾಡಿದ್ದಾರೆ. ಎಲ್ಲಾ ಎಡಪಂಥೀಯರಿಗೆ ಬೆಂಬಲವಾಗಿ ನಿಂತವರು ಸಿದ್ದರಾಮಯ್ಯ. ಅವರ ಮನೆಯಲ್ಲೆ ಸಭೆ ಮಾಡಿ ಎಸ್‌ಐಟಿ ತನಿಖೆ ಶುರು ಮಾಡಲಾಗಿತ್ತು.

Advertisement

ಎಡಪಂಥೀಯರು ಸೇರಿ ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಮಾಡಿದ್ದಾರೆ. ತಿರುಪತಿ, ಧರ್ಮಸ್ಥಳ, ಅಯ್ಯಪ್ಪ ಎಲ್ಲರನ್ನೂ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ. ಎಲ್ಲಾ ಎಡಪಂಥೀಯರಿಗೆ ಬೆಂಬಲವಾಗಿ ನಿಂತವರು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಬಗ್ಗೆ ಕಡಿಮೆ ನಿಷ್ಠೆ ಇರೋರು ಕಮ್ಯುನಿಸ್ಟ್‌ಗಳು. ಅವರೆಲ್ಲಾ ಸೇರಿ ಕುತಂತ್ರ ಮಾಡಲು ಹೊರಟಿದ್ದಾರೆ. ಇವರಿಗೆಲ್ಲಾ ಮಾಸ್ಟರ್ ಮೈಂಡ್ ಸಿದ್ದರಾಮಯ್ಯ. ಅವರ ಮನೆಯಲ್ಲಿ ಸೇರಿ ಸಭೆ ಮಾಡಿ ಎಸ್‌ಐಟಿ ತನಿಖೆ ಮಾಡಿಸಿದ್ದಾರೆ. ಪ್ರಣವ್ ಮೊಹಂತಿ ಹೆಸರೇಳಿ ಅವರನ್ನೇ ನೇಮಕ ಮಾಡಿದ್ದು ಎಡಪಂಥೀಯರು. ರಾಜ್ಯದ ಎಲ್ಲಾ ದೇವಸ್ಥಾನ ಪರ ನಾವು ಇರ್ತೇವೆ. ಹಿಂದೂ ದೇವಾಲಯಕ್ಕೆ ಏನಾದ್ರೂ ಆದ್ರೆ ನಾವು ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ


Spread the love

LEAVE A REPLY

Please enter your comment!
Please enter your name here