HomeKarnataka Newsಧರ್ಮಸ್ಥಳ ಪ್ರಕರಣ| ಅನಾಮಿಕ ವ್ಯಕ್ತಿಯ ಕುರಿತಂತೆ ತನಿಖೆ ಆಗಲಿ - ಅಶ್ವಥ್‌ನಾರಾಯಣ!

ಧರ್ಮಸ್ಥಳ ಪ್ರಕರಣ| ಅನಾಮಿಕ ವ್ಯಕ್ತಿಯ ಕುರಿತಂತೆ ತನಿಖೆ ಆಗಲಿ – ಅಶ್ವಥ್‌ನಾರಾಯಣ!

For Dai;y Updates Join Our whatsapp Group

Spread the love

ಬೆಂಗಳೂರು:- ಧರ್ಮಸ್ಥಳದ ವಿರುದ್ಧ ಪೋಸ್ಟ್‌ ಹಾಕಿದ್ರೆ ಕೇಸ್‌ ದಾಖಲಾಗಲ್ಲ ಯಾಕೆ ಎಂದು ಶಾಸಕ ಡಾ. ಸಿ.ಎನ್. ಅಶ್ವಥ್‌ನಾರಾಯಣ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ನಿಜಕ್ಕೂ ಮಂಜುನಾಥೇಶ್ವರ ದೇವರನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಜನರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದೀರಾ? ಸರಕಾರ ಬದುಕಿದೆಯೇ ಇಲ್ಲವೇ ಎಂದು ಗೊತ್ತಾಗಬೇಕಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬದುಕಿದ್ದರೆ ತೋರಿಸಲಿ. ಯಾರಾದರೂ ತನಿಖೆಗೆ ಅಡಚಣೆ ಮಾಡಿದ್ದಾರಾ? ತನಿಖೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅನಾಮಿಕ ವ್ಯಕ್ತಿಯ ಕುರಿತಂತೆಯೂ ತನಿಖೆ ಆಗಬೇಕು ಎಂದು ಕೋರಿದರು.

ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸಂದರ್ಭದಲ್ಲಿ ನೀವು ಅದನ್ನು ಸಮರ್ಥನೆ ಮಾಡಿದ್ದೀರಿ. ಪೊಲೀಸ್ ಠಾಣೆಗೆ ಬೆಂಕಿ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಜೀಪಿಗೆ ಬೆಂಕಿ, ಶಾಸಕರ ಮನೆಗೆ ಬೆಂಕಿ ಇಟ್ಟದ್ದನ್ನು ಸಮರ್ಥಿಸಿದ್ದೀರಿ ತಾನೇ ಎಂದು ಅವರು ಪ್ರಶ್ನಿಸಿದರು. ಧರ್ಮಸ್ಥಳದಲ್ಲಿ ಇಂಥ ಘಟನೆ ನಡೆದಿದೆಯೇ? ಯೂ ಟ್ಯೂಬರ್‌ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಸಾಮಾಜಿಕ ಜಾಲತಾಣದಲ್ಲಿ ಇವರೇ ತನಿಖೆ ನಡೆಸಿ ಇವರೇ ತೀರ್ಪು ಕೊಡುತ್ತಾರೆ. ಇದರಿಂದ ಹಿಂದೂ ಸಮಾಜ- ಶ್ರೀ ಮಂಜುನಾಥೇಶ್ವರನನ್ನು ನಂಬುವ ಭಕ್ತರಿಗೆ ಬಹಳಷ್ಟು ನೋವಾಗಿದೆ ಎಂದು ಅಶ್ವಥ್‌ನಾರಾಯಣ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!