ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಸ್ಐಟಿ ತಂಡಕ್ಕೆ ಧರ್ಮಸ್ಥಳಕ್ಕೆ ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡುವಂತೆ ಸೂಚಿಸಿದ್ದೇವೆ.
ಸದ್ಯದಲ್ಲೇ ಎಸ್ಐಟಿ ತಂಡ ಅಲ್ಲಿಗೆ ಹೋಗಲಿದೆ. ಧರ್ಮಸ್ಥಳ ಪೊಲೀಸರಿಗೂ ಸೂಚನೆ ನೀಡಿದ್ದೇವೆ. ಎಸ್ಐಟಿ ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ. ಹೊರಗೆ ಉಳಿಯೋದಾದ್ರೆ ನಮಗೆ ತಿಳಿಸಲಿ. ಆ ನಂತರ ಅದರ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.
ಎಸ್ಐಟಿ ತನಿಖೆಗೆ ಬಿಜೆಪಿಯವರಿಂದ ಯಾಕೆ ಆಕ್ಷೇಪ?. ಈಗಿನಿಂದ್ಲೇ ಏನೇನೋ ಫ್ರೇಮ್ ಮಾಡ್ತಿದ್ದಾರೆ. ರಾಜಕೀಯ ಉದ್ದೇಶವಿದೆ ಅಂತ ಯಾಕೆ ಹೇಳ್ತಾರೆ. ಎಸ್ಐಟಿ ತನಿಖೆಗೆ ಯಾಕೆ ಅವರ ವಿರೋಧ. ಇದನ್ನು ನೋಡಿದ್ರೆ ಅವರ ಮನಸ್ಸಲ್ಲಿ ಏನೋ ಇರಬಹುದು ಎಂದು ಬಿಜೆಪಿಯವರ ಆಕ್ಷೇಪಕ್ಕೆ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.



