ಬೆಂಗಳೂರು: ತಲೆಬುರುಡೆ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯೇ ನೀಡಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯವು ಲಕ್ಷಾಂತರ ಭಕ್ತರ ಆಸ್ಥಾನವಾಗಿದ್ದು, ಇದರ ಪಾವಿತ್ರತೆಗೆ ಭಂಗ ತರುವ ಉದ್ದೇಶದಿಂದ ಕೆಲವು ಕೃತ್ಯಮಿಗಳು ಕೆಲಸ ಮಾಡಿದ್ದಾರೆ ಎಂದು ದೇವೇಗೌಡ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಎಂದು ಉಲ್ಲೇಖಿಸಿದ ದೇವೇಗೌಡರು, “ತನಿಖೆಯ ವಿಷಯದ ಬಗ್ಗೆ ಈಗ ಹೆಚ್ಚಿನದನ್ನು ಹೇಳುವುದಿಲ್ಲ” ಎಂದು ತಿಳಿಸಿದ್ದಾರೆ. ತನಿಖೆಯ ಮೂಲಕ ಸತ್ಯಾಂಶಗಳು ಹಂತಹಂತವಾಗಿ ಬಹಿರಂಗಗೊಳ್ಳುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.