ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. 13 ಸ್ಥಳಗಳ ಪೈಕಿ 12 ಜಾಗಗಳಲ್ಲಿ ಅಗೆದು 13ನೇ ಸ್ಥಳಕ್ಕೆ ಕಾಲಿಟ್ಟಿದ್ದಾರೆ.
Advertisement
ಇಂದು ಪಾಯಿಂಟ್ ನಂಬರ್ 13ಕೊನೆಯ ಪಾಯಿಂಟ್‌ನಲ್ಲಿ ಶವದ ಶೋಧ ಕಾರ್ಯ ನಡೆಯಲಿದೆ. ಇದುವರೆಗೆ ನೇತ್ರಾವತಿ ಸ್ನಾನ ಘಟ್ಟದ ಪಕ್ಕದ ಬಂಗ್ಲಗುಡ್ಡ ಪ್ರದೇಶದಲ್ಲಿರುವ ಕಾನನದಲ್ಲಿ 12 ಸ್ಥಳಗಳನ್ನು ಅಗೆಯಲಾಗಿದೆ. ಅದರಲ್ಲಿ 6ನೇ ಸ್ಥಳ ಬಿಟ್ರೆ ಬೇರೆ ಸ್ಥಳಗಳಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ.
ಈ ನಡುವೆ 13ನೇ ಸ್ಥಳ ಮಹತ್ವ ಪಡೆದಿದೆ. ಈ ಜಾಗದ ಉತ್ಖನನದ ಬಳಿಕ SIT ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕಾರ್ಯಾಚರಣೆ ಮುಂದುವರೆಸಬೇಕೊ ಅಥವಾ ನಿಲ್ಲಿಸಬೇಕು ಎಂ ನಿರ್ಧಾರವನ್ನ ಕೂಡ ಇಂದೇ ತೆಗೆದುಕೊಳ್ಳುವ ಸಾಧ್ಯತೆ ಇದೆ.