ಮಂಗಳೂರು : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇದರ ನಡುವೆ ಮಹೇಶ್ ಶೆಟ್ಟಿ ತಿಮ್ಮರೋಡಿ ಮತ್ತು ವಸಂತ್ ಗಿಳಿಯಾರ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಸರ್ಕಾರಿ ಅತಿಥಿಗೃಹದ ಬಳಿ ಎರಡು ವರ್ಷಗಳ ಹಿಂದೆ ತೆಗೆದ ಫೋಟೋವೊಂದನ್ನು ಪ್ರವೀಣ್ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿ ಜೊತೆಗೆ ವಸಂತ್ ಗಿಳಿಯಾರ್ ಕಾಣಿಸಿಕೊಂಡಿದ್ದಾರೆ. ಈ ಫೋಟೋದೊಂದಿಗೆ ಪ್ರವೀಣ್ ಎಂಬುವವರು ಬರೆದಿರುವ ಪೋಸ್ಟ್‌ನಲ್ಲಿ,
‘ಅಣ್ಣನ ಜೊತೆ ಮೈಸೂರಿನ ಜಲದರ್ಶಿನಿಯಲ್ಲಿ ಎರಡು ವರ್ಷದ ಹಿಂದೆ ಸತ್ಯಶೋದನೆ ವರದಿ ಆರಂಭದ ದಿನ’ ಎಂದು ಉಲ್ಲೇಖಿಸಲಾಗಿದೆ. ಆದರೆ ಇಂದು ವಸಂತ್ ಗಿಳಿಯಾರ್ ತಿಮ್ಮರೋಡಿ ವಿರುದ್ಧ ಧ್ವನಿಯೆತ್ತಿ, ಧರ್ಮಸ್ಥಳದ ಪರವಾಗಿ ನಿಲುವು ವ್ಯಕ್ತಪಡಿಸಿರುವುದು ಈ ವಿಷಯಕ್ಕೆ ಹೊಸ ತಿರುವು ನೀಡಿದೆ. ಈ ಫೋಟೋ ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಹೊರಗೆ ತೆಗೆದದ್ದು ಎಂದು ದೃಢಪಟ್ಟಿದ್ದು, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಭೆ ನಡೆದಿರುವ ಸಾಧ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.