ಬೆಂಗಳೂರು: ಜೆಡಿಎಸ್‌ನ ಧರ್ಮಸ್ಥಳ ಸತ್ಯಯಾತ್ರೆ ಯಶಸ್ವಿಯಾಗಿದೆ. ಆಗಸ್ಟ್ 31ರಂದು ಹಾಸನದಿಂದ ಹೊರಟ ಸತ್ಯಯಾತ್ರೆ, ಧರ್ಮಸ್ಥಳದಲ್ಲಿ ಕಹಳೆ ಮೊಳಗಿಸಿತ್ತು. ಧರ್ಮಸ್ಥಳದ ಪರ ನಾವಿದ್ದೇವೆ ನಮ್ಮ ಕುಟುಂಬ ಯಾವಾಗ್ಲೂ ನಿಮ್ಮ ಬೆಂಬಲಕ್ಕೆ ಇರುತ್ತೆ. ಧರ್ಮಸ್ಥಳ ಸತ್ಯಯಾತ್ರೆಯ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ, ತಮ್ಮ ಎಕ್ಸ್ ಖಾತೆಯ ಮೂಲಕ ಸರ್ವರಿಗೂ ಧನ್ಯವಾದ ತಿಳಿಸಿದ್ದಾರೆ.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು, ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ವಹಿಸಬೇಕೆದು ಆಗ್ರಹಿಸಿ, ಪಕ್ಷದ ವತಿಯಿದ ಜರುಗಿದ ಧರ್ಮಸ್ಥಳ ಸತ್ಯಯಾತ್ರೆ ಕಾರ್ಯಕ್ರಮಕ್ಕೆ, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಯಶಸ್ವಿಗೊಳಿಸಿದರು.
ಪಕ್ಷದ ಎಲ್ಲಾ ನಾಯಕರಿಗೆ ಹಾಗೂ ಕಾರ್ಯಕರ್ತ ಭಕ್ತರಿಗೆ,ಬಂಧುಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ ಚಿಕ್ಕವಯಸ್ಸಿನಿಂದಲೂ ನಾನು ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಿದ್ದೇನೆ. ಈಗ ಧರ್ಮ ಉಳಿಯಬೇಕು ಎಂದು ನಾವು ಯಾತ್ರೆ ಮಾಡಿದ್ದೇವೆ. ರಾಜಕೀಯಕ್ಕಾಗಿ ನಾವು ಯಾತ್ರೆ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೊತ್ತಿ ಹೇಳಿದರು.
ಧರ್ಮಸ್ಥಳದ ದೂರುದಾರನನ್ನು ನೋಡಿದ್ರೆ ಅವನ ಹಿಂದೆ ಒಬ್ಬರು ಇಬ್ಬರು ಇಲ್ಲ. ದೊಡ್ಡ ಸಂಸ್ಥೆಗಳೇ ಇದೆ. ಕೇಂದ್ರದ ತನಿಖಾ ಸಂಸ್ಥೆಯಿಂದಲೇ ಈ ಬಗ್ಗೆ ತನಿಖೆ ಆಗಬೇಕು ಇದೇ ಸಂಪೂರ್ಣ ಜೆಡಿಎಸ್ ಪಕ್ಷದ ಆಗ್ರಹ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.