ಬೆಂಗಳೂರು:- ರಾಜಕೀಯ ಕುತಂತ್ರಕ್ಕೆ ಧರ್ಮಸ್ಥಳ ಬಲಿ ಆಗಬಾರದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಧರ್ಮಸ್ಥಳವನ್ನ ಅಶುದ್ಧ ಮಾಡ್ತಿದ್ದಾರೆ. ನಾನು ಹೆಗಡೆ ಅವರಿಗೆ ಮನವಿ ಮಾಡ್ತೀನಿ. ಈ ಕ್ಷೇತ್ರ ದುರ್ಬಳಕೆ ಮಾಡಿಕೊಳ್ಳೋಕೆ ಬಿಡಬಾರದು. ಧರ್ಮಸ್ಥಳದ ಈ ಕೇಸ್ ಬಿಜೆಪಿಯ ಎರಡು ಗುಂಪಿನ ಇಂಟ್ರನಲ್ ಫೈಟ್‌ನಿಂದ ನಡೆಯುತ್ತಿದೆ ಎಂದಿದ್ದಾರೆ.
ನಾನು ಆನ್ ರೆಕಾರ್ಡ್ ಹೇಳ್ತಾ ಇದ್ದೀನಿ. ಈಗ ಯಾರು ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಆಗಿರೋರು ಏನು ಹೇಳಿದ್ರು. ಬಿಜೆಪಿಯ ಎರಡು ಗುಂಪುಗಳು ಮತ್ತು ಅದರ ಸಂಘಟನೆಗಳಿಂದ ಆಗ್ತಿದೆ. ಬಿಜೆಪಿ ಪಾರ್ಟಿ ಅವರೇ ಧರ್ಮಸ್ಥಳದ ಮೇಲೆ ಮಸಿ ಬಳಿಯೋಕೆ ಕೆಲಸ ಮಾಡ್ತಿದ್ದಾರೆ. ಈಗ ಅದನ್ನು ಮುಚ್ಚಿ ಹಾಕೋಕೆ ಪ್ರಯತ್ನವನ್ನು ಅವರೇ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.