ಬೀದರ್:- ಸರ್ಕಾರದಿಂದ ಧರ್ಮಸ್ಥಳಕ್ಕೆ ಕಳಂಕ ಆಗುವುದಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ತಲೆಬುರುಡೆ ಪ್ರಕರಣ ಬಿಜೆಪಿಯ ಸೃಷ್ಟಿ. ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಸರ್ಕಾರದಿಂದ ಧರ್ಮಸ್ಥಳಕ್ಕೆ ಕಳಂಕ ಆಗುವುದಿಲ್ಲ. ಬಿಜೆಪಿಯವರೇ ಈ ಅನಾಮಿಕ ವ್ಯಕ್ತಿಯನ್ನು ಸೃಷ್ಟಿ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿಯವರು ಇಂಥವರನ್ನು ಸೃಷ್ಟಿ ಮಾಡುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
ಬಿಜೆಪಿಯವರು ಅವರ ಸ್ವಾರ್ಥಕ್ಕಾಗಿ ಸೃಷ್ಟಿ ಮಾಡಿ ತನಿಖೆ ಮಾಡಿ ಎಂದು ಹೇಳುತ್ತಾರೆ. ತನಿಖೆ ಮಾಡುವಾಗ ಅದರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಧರ್ಮಸ್ಥಳಕ್ಕೆ ಕಳಂಕ ತರುವ ಯಾವ ಮನಸ್ಸು ನಮಗಿಲ್ಲ. ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ನಾವು ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಾಗುತ್ತಿದೆ. ಆದರೆ ಬಿಜಪಿಯವರು ಹೊಟ್ಟೆ ಕಿಚ್ಚಿನಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಧರ್ಮಸ್ಥಳಕ್ಕೆ ಹಲವಾರು ಬಾರಿ ಹೋಗಿ ಮಂಜುನಾಥ ದೇವರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.