ಅಣ್ಣಿಗೇರಿ/ಗದಗ:- ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ಜರುಗಿದೆ.
ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕ್ವಾಲಿಸ್ ಕಾರೊಂದು ವೇಗವಾಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಮೃತರನ್ನು ಬೆಂಗಳೂರಿನ ಸಾಫ್ಟವೇರ್ ಇಂಜಿನಿಯರ್ ಲಕ್ಷ್ಮಿ ನಾರಾಯಣ ನಾಗೇಂದ್ರ ವೇಣುಗೋಪಾಲ ತಂದೆ ಡಿ.ಎಲ್ ನಾಗೇಂದ್ರ (62), ಮೈಸೂರಿನ ನಿವೃತ್ತ ಎಇಇ ಮದನ ಮೋಹನ ತಂದೆ ಎಸ್. ಜಯರಾಜನ್ (64) ಹಾಗೂ ಚಾಲಕ ಜಯನ್ ಸುರೇಶನ್ ತಂದೆ ಜಯನ್ (64) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ಇರುವ ಮಾವಿನ ತೋಟ ನೋಡಿಕೊಂಡು ಮರಳಿ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ, ನವಲಗುಂದ ಸಿಪಿಐ ರವಿ ಕಪ್ಪತನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.