ಧಾರವಾಡ: ರಸ್ತೆ ಮೇಲೆಯೇ ಚರಂಡಿ ನೀರು.. ಗಬ್ಬೆದ್ದು ನಾರುತ್ತಿದೆ ಏರಿಯಾ – ಜನರ ಕಷ್ಟ ಕೇಳೋರು ಯಾರು?

0
Spread the love

ಧಾರವಾಡ: ಧಾರವಾಡದ ಶಿವಾಜಿ ವೃತ್ತದಿಂದ ಮುಂದೆ ಇರುವ ಧಾರವಾಡ-ನವಲಗುಂದ ಮುಖ್ಯ ರಸ್ತೆಯಲ್ಲಿನ ಮ್ಯಾನ್‌ಹೋಲ್‌ನಿಂದ ಚರಂಡಿ ನೀರು ಉಕ್ಕಿ ಹರಿಯುತ್ತಿದೆ.

Advertisement

ಈ ಮ್ಯಾನ್‌ಹೋಲ್ ಹುಗಿದು ಹೋಗಿದ್ದರಿಂದ ನೀರು ಮುಂದೆ ಸಾಗಲಾರದೇ ರಸ್ತೆ ಮೇಲೆಯೇ ಉಕ್ಕುತ್ತಿದೆ. ಕೊಳಚೆ ನೀರು ಎರಡ್ಮೂರು ದಿನಗಳಿಂದ ರಸ್ತೆಯ ಮೇಲೆಯೇ ಹರಿಯುತ್ತಿರುವುದರಿಂದ ಪ್ರೇಮನಗರ ಗಬ್ಬೆದ್ದು ನಾರುತ್ತಿದೆ.

ಪಾಲಿಕೆಯವರಿಗೆ ಈ ವಿಷಯ ಗೊತ್ತಿಲ್ಲ ಅಂತಾ ಏನಲ್ಲ. ಈ ವಿಷಯ ಅವರ ಗಮನಕ್ಕಿದೆ. ಆದರೆ, ಆ ಮ್ಯಾನ್‌ಹೋಲ್ ದುರಸ್ತಿಗೊಳಿಸುವ ಕೆಲಸ ಮಾತ್ರ ಆಗಿಲ್ಲ. ಕೊಂಚ ಮಳೆ ತಣ್ಣಗಾಗಿದ್ದು, ಈಗಲಾದರೂ ಇದನ್ನು ದುರಸ್ತಿಗೊಳಿಸಿ ಅಲ್ಲಿನ ನಿವಾಸಿಗಳಿಗೆ ಗಬ್ಬು ವಾಸನೆಯಿಂದ ಮುಕ್ತಿ ನೀಡುವ ಕೆಲಸವನ್ನು ಪಾಲಿಕೆ ಮಾಡಬೇಕಿದೆ.


Spread the love

LEAVE A REPLY

Please enter your comment!
Please enter your name here