ಚಿತ್ರದುರ್ಗ:- ನಟ ಧೃವ ಸರ್ಜಾ ಅವರು ಇಂದು ಚಿತ್ರದುರ್ಗದ ಹೊರ ವಲಯದಲ್ಲಿರುವ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ.
Advertisement
ಭೇಟಿ ವೇಳೆ ಶ್ರೀಗಳು ಹಾಗೂ ಹಿರಿಯ ಶ್ರೀಗಳ ಗದ್ದಿಗೆಗೆ ಕೈ ಮುಗಿದು ಧೃವ ಸರ್ಜಾ ಆಶೀರ್ವಾದ ಪಡೆದಿದ್ದಾರೆ. ಮಾರ್ಟಿನ್ ಚಿತ್ರದ ಟ್ರೈಲರ್ ಲಾಂಚಿಂಗ್ ಇವೆಂಟ್ ಗೆ ನಟ ದ್ರುವ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹಿರಿಯೂರು ಹಾಗೂ ಚಿತ್ರದುರ್ಗದ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.
ಈ ವೇಳೆ ದ್ರುವ ಸರ್ಜಾ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಅಲ್ಲದೇ ಮಠದಲ್ಲಿ ಅಭಿಮಾನಿಗಳು ಜಮಾಯಿಸಿದರು. ಧೃವ ಸರ್ಜಾ ನೋಡಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದ ದೃಶ್ಯ ಕಂಡು ಬಂದಿದೆ.