ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ನಿನ್ನೆ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ದೃಶ್ಯ ಸಮೇತ ಮುನ್ನಲೆಗೆ ಬಂದಿವೆ. ಚೇರ್ ಮೇಲೆ ಕುಳಿತುಕೊಂಡು ದರ್ಶನ್ ಕೈಯಲ್ಲಿ ಟೀ ಕಪ್ ಮತ್ತು ಸಿಗರೇಟು ಸೇದುತ್ತಾ ರೌಡಿಗಳೊಂದಿಗೆ ಮಾತನಾಡುವ ಫೋಟೋ ವೈರಲ್ ಆಗಿದ್ದವು. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್ ನಾಗರಾಜ್ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು.
ಇನ್ನೂ ನಟಿ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿನಟ ದರ್ಶನ್ನನ್ನು ಭೇಟಿಯಾಗಿದ್ದರು. ಅದೇ ದಿನವೇ ನಟ ದರ್ಶನ್ ಸಿಗರೇಟ್ ಪಾರ್ಟಿ ಮಾಡಿದರಾ ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ.
ದರ್ಶನ್ ಸಿಗರೇಟ್- ಟೀ ಪಾರ್ಟಿಯ ಫೋಟೋ ತೆಗೆದವನು ರೌಡಿಶೀಟರ್ ವೇಲು ಎಂದು ಗೊತ್ತಾಗಿದೆ. ಇದನ್ನು ಆತ ಮೈಸೂರಿನಲ್ಲಿರುವ ದರ್ಶನ್ ಫ್ಯಾನ್ಸ್ಗೆ ಕಳಿಸಿದ್ದ. ಅಲ್ಲಿಂದ ಚಾಮರಾಜನಗರದ ಕ್ರೈಂ ಪೊಲೀಸ್ ಒಬ್ಬರಿಗೆ ಫೋಟೋ ತಲುಪಿತ್ತು. ಪೋಟೋ ಲೀಕ್ ಆಗದಂತೆ ತಡೆಯಲು ಲಕ್ಷಾಂತರ ರೂಪಾಯಿಯ ಡೀಲ್ ಸಹ ನಡೆದಿತ್ತು ಎಂದು ಗೊತ್ತಾಗಿದೆ.
ಆದರೆ ಫೋಟೋ ಲೀಕ್ ಆಗಿಯೇ ಬಿಟ್ಟಿದೆ. ಸೋರಿಕೆ ಆದ ಬೆನ್ನಲ್ಲೇ ಎಎಜಿ ಆನಂದ್ ರೆಡ್ಡಿ ಕೈದಿಗಳು ಹಾಗೂ ಅಧಿಕಾರಿಗಳನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿ ಪ್ರಕರಣದ ಬಗ್ಗೆ ಡಿಜಿಗೆ ವರದಿ ಸಲ್ಲಿಸಿದ್ದಾರೆ. ದರ್ಶನ್, ನಾಗ ಸಿಗರೇಟ್ ಪಾರ್ಟಿ ಮಾಡಿರುವ ಫೋಟೋ ಯಾವತ್ತಿನದು, ಯಾರು ಫೋಟೋ ತೆಗದದ್ದು ಎಂಬ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.