ಫೈಬರ್‌ ಮಚ್ಚು ನೀಡಿ ಪೊಲೀಸರನ್ನೇ ಬಕ್ರಾ ಮಾಡಿದ್ರಾ ವಿನಯ್‌, ರಜತ್?

0
Spread the love

ಬಿಗ್ ​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಳೆದ ಕೆಲ ದಿನಗಳ ಹಿಂದೆ ಲಾಂಗು ಮಚ್ಚು ಹಿಡಿದು ರೋಡ್‌ ನಲ್ಲಿ ರೀಲ್ಸ್‌ ಮಾಡುತ್ತಿರುವ ವಿಡಿಯೋ ಸಖತ್‌ ಸೆನ್ಷೇಷನ್‌ ಕ್ರಿಯೇಟ್‌ ಮಾಡಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇಬ್ಬರನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಅಂದ ಹಾಗೆ ವಿನಯ್‌ ಹಾಗೂ ರಜನ್‌ ವಿಡಿಯೋದಲ್ಲಿ ಬಳಸಿದ್ದು ಮಚ್ಚನ್ನು ಪೊಲೀಸರಿಗೆ ನೀಡಿದ್ದಾರೆ. ಫೈಬರ್‌ ಮಚ್ಚನ್ನು ಪೊಲೀಸರಿಗೆ ನೀಡಲಾಗಿದ್ದು ಇದೀಗ ತಮಗೆ ನೀಡಿರುವ ಮಚ್ಚಿನ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ.

Advertisement

ರಜತ್‌ ಹಾಗೂ ವಿನಯ್‌ ಪೊಲೀಸರಿಗೆ ನೀಡಿರುವ ಮಚ್ಚಿಗೂ ವಿಡಿಯೋದಲ್ಲಿರುವ ಮಚ್ಚಿಗೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ, ಇವರು ಪೊಲೀಸರನ್ನೇ ಬಕ್ರಾ ಮಾಡಿದರೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ರಜತ್‌ ಹಾಗೂ ವಿನಯ್‌ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಿ ಬಳಿಕ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ವಿಚಾರಣೆ ವೇಳೆ ಸಲ್ಲಿಕೆಯಾದ ಫೈಬರ್ ಮಚ್ಚಿನ ಮೇಲೆ ಅನುಮಾನ ಮೂಡಿದೆ. ಹೀಗಾಗಿ ವಿಡಿಯೋ ಮತ್ತು ವಶಕ್ಕೆ ಪಡೆದಿದ್ದ ಫೈಬರ್ ಮಚ್ಚಿನ ತಾಳೆ ನಡೆಯಲಿದೆ. ವಿಡಿಯೋದಲ್ಲಿ ಬಳಕೆಯಾದ ಮಚ್ಚು ಒರಿಜಿನಲ್ ಮಚ್ಚಿನ ರೀತಿಯೇ ಕಾಣಿಸುತ್ತಿದೆ. ಕೇಸ್​ನಿಂದ ತಪ್ಪಿಸಿಕೊಳ್ಳಲು ರಜತ್, ವಿನಯ್ ಫೈಬರ್ ಮಚ್ಚು ತಂದು ಕೊಟ್ರಾ ಎಂಬ ಅನುಮಾನ ಶುರುವಾಗಿದೆ.

ಬೆಂಗಳೂರಿನ ಬಸವೇಶ್ವರ ನಗರದ ಸಬ್​ ಇನ್​ಸ್ಪೆಕ್ಟರ್ ಅವರಿಂದ ಹಲವು ಗಂಟೆಗಳ ಕಾಲ ವಿನಯ್ ಹಾಗೂ ರಜತ್ ಅವರ ವಿಚಾರಣೆ ನಡೆದಿದೆ. ರಿಯಾಲಿಟಿ ಶೋ ಸಲುವಾಗಿ ತಾವು ಈ ರೀಲ್ಸ್‌ ಮಾಡಿರೋದಾಗಿ ವಿನಯ್‌ ಹಾಗೂ ರಜತ್‌ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ವಿನಯ್ ‘ಪುಷ್ಪ’ ಪಾತ್ರ ಹಾಗೂ ರಜತ್ ‘ದರ್ಶನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ಪ್ರಮೋಷನ್ ಸಲುವಾಗಿ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದೆವು’ ಎಂದು ಇಬ್ಬರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here