ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗೆ ನಿಮ್ಮ ಸಂಸದರ ವಿರುದ್ಧ ಕ್ರಮ ತೆಗೆದುಕೊಂಡ್ರಾ? ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ವಕ್ಫ್ ವಿಚಾರದಲ್ಲಿ ಬಾಯಿ ಇಲ್ಲ. ಚಂದ್ರಶೇಖರ ಸ್ವಾಮೀಜಿಗಳು ಇಡೀ ಸಮುದಾಯಕ್ಕೆ ಆಗಿರುವ ಅನ್ಯಾಯ ಕುರಿತು ಹೇಳಿದರು. ನಿಮ್ಮ ಓಲೈಕೆ ರಾಜಕಾರಣ ಕಂಡು ಮಾತನಾಡಿದರು.
ಮಾರನೇ ದಿನ ವಿಷಾದ ವ್ಯಕ್ತಪಡಿಸಿದ್ದರು. ಆದರೆ ನೀವು ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗೆ ನಿಮ್ಮ ಸಂಸದರ ವಿರುದ್ಧ ಕ್ರಮ ತೆಗೆದುಕೊಂಡ್ರಾ? ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುತ್ತೀರಾ? ನೀವು ನಿಜವಾದ ಕಾನೂನು ಪಾಲಕರೇ ಆಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.
ನಿಮ್ಮ ಹಾಗೆ ಸ್ವಾಮೀಜಿಗಳು ಭಂಡರಲ್ಲ ಕೇಸ್ ಹಾಕಿದೀರ, ಬನ್ನಿ ಹೇಳಿಕೆ ತಗೊಳ್ಳಿ ಎಂದಿದ್ದಾರೆ ಸರ್ಕಾರದ ನಡೆಯನ್ನು ಜನ ಒಪ್ಪುವುದಿಲ್ಲ. ಹೋಗಿ ಮಠದಲ್ಲೇ ಉತ್ತರ ಪಡೆದುಕೊಳ್ಳಿ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಒಕ್ಕಲಿಗ ಸಮಾವೇಶದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಹೇಳಿದ್ದಿರಿ ಈಗ ಏನಾಯ್ತು? ನಿಮ್ಮ ಬೆದರಿಕೆಗೆ ಸಮಾಜ ಹೆದರಲ್ಲ, ಕಾನೂನು ಪಾಲನೆ ಏನು ಅಂತ ನಮಗೂ ಗೊತ್ತಿದೆ ಎಂದು ಕಿಡಿಕಾರಿದರು.