ಗದಗ: ಗದಗ ಶಹರದ ಹತ್ತಿಕಾಳ ಕೂಟ ಏರಿಯಾದಲ್ಲಿ ಬಿದ್ದು ಗಾಯಗೊಂಡು ವ್ಯಕ್ತಿಯೋರ್ವ ಸಾವನ್ನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು ಮೃತ ಮಗನ ಸ್ನೇಹಿತನಿಂದಲೇ ಕೊಲೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುರೇಶ್ ಮೂಲಿಮನಿ (50) ಮೃತ ವ್ಯಕ್ತಿಯಾಗಿದ್ದು, ಸುಬ್ರಹ್ಮಣ್ಯ ತಂದೆ ನಾಗರಾಜ್ ಯಲಿಗಾರ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ದಿ.15/7/2024 ರಂದು ರಾತ್ರಿ 10:30ಕ್ಕೆ ಕುಡಿದ ನಶೆಯಲ್ಲಿ ಹೋಗುವಾಗ ಕಿರಾತಕ ರಾತ್ರಿ ತಲೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದನು.
ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ದಿ.16ರಂದು ಸುರೇಶ್ ಮೃತಪಟ್ಟಿದ್ದ. ಬಿದ್ದು ಗಾಯಗೊಂಡಿರಬಹುದು ಅಂತ ಕುಟುಂಬಸ್ಥರು ತಿಳಿದುಕೊಂಡಿದ್ದರು. ಆ ಪ್ರಕಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಟುಂಬದ ಸದಸ್ಯರ ಅನುಮಾನದಿಂದ ಪೊಲೀಸರು ಪ್ರಕರಣ ಭೇದಿಸಿ ವಿಚಾರಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಮೃತ ವ್ಯಕ್ತಿಯು ಆರೋಪಿ ಸುಬ್ರಹ್ಮಣ್ಯನಿಗೆ ನಮ್ಮ ಮಗನ ಜೊತೆಗೆ ಒಡನಾಟ ಬೇಡ, ಕೆಟ್ಟ ಚಟ ಕಲಿಸಬೇಡ ಅಂತ ಬುದ್ಧಿ ಹೇಳಿದ್ದನು. ಅದೇ ಕೋಪದಿಂದ ಕೊಲೆ ಮಾಡಿ ಪರಾರಿಯಾಗಿದ್ದನು.
ಸದ್ಯ ಆರೋಪಿ ಸುಬ್ರಹ್ಮಣ್ಯ ಯಲಿಗಾರನನ್ನು ಬಂಧಿಸಿರೋ ಪೊಲೀಸರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಕಲಿಗಾಲ ಮಾನವವೀಯ ಮೌಲ್ಯಗಳಿಂದ ಕ್ರೂರ ಮನಸ್ಕ
ರಾಗುವತ್ತ ಮನುಕುಲವನ್ನು ಕೊಂಡೊಯುತ್ತಿದೆ.ಯಾರ
ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿಯದಂತಾ ಕಾಲ
ತಂದೆ ಸ್ನೇಹಿತನನ್ನೆ ಬುಧ್ಧಿವಾದ ಹೇಳಿದ ಕಾರಣಕ್ಕೆ ಕೊಲೆ
ಮಾಡುವಷ್ಟು ಕ್ರೂರಿಗಳಾಗಲು ಯುವ ಮನಸ್ಸುಗಳು ಈ
ಪರಿಸ್ಥಿತಿ ತಿಳಿಯಾಗಬೇಕು.ಯುವ ಪೀಳಿಗೆ ಸದ್ವಿಚಾರಗಳತ್ತ
ಚಿಂತಿತರಾಗಬೇಕು.