ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಕೈಗೊಂಡಿರುವ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಸೂಕ್ಷಮವಾಗಿ ಗಮನಿಸಿದ ಇಂಗ್ಲ್ಯಾಂಡ್‌ನ ವೇಯ್ನ ಕಾರ್ಟರ್ ಶಿಕ್ಷಣ ಪ್ರೇಮಿ ದಂಪತಿಗಳು ಬಿ.ಜಿ. ಅಣ್ಣಿಗೇರಿ ಗುರುಗಳ ಗುರುಕುಲ ಆಶ್ರಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಒಂದು ಲಕ್ಷ ರೂ. ಮೌಲ್ಯದ ಡಿಜಿಟಲ್ ಇಂಟ್ರಾಕ್ಟಿವ್ ಫ್ಲಾಟ್ ಬೋರ್ಡ್ನ್ನು ದೇಣಿಗೆಯಾಗಿ ನೀಡಿದ್ದಾರೆ. ಇತ್ತಿಚೆಗೆ ಆಶ್ರಮಕ್ಕೆ ಆಗಮಿಸಿದ್ದ ವೇಯ್ನ ಕಾರ್ಟರ್ ದಂಪತಿಗಳು ಆಶ್ರಮದಲ್ಲಿ ವಿದ್ಯಾರ್ಥಿಗಳ ಕಲಿಕಾ ಕ್ರಮವನ್ನು ಅವಲೋಕಿಸಿ ದೇಣಿಗೆ ನೀಡಲು ಮುಂದಾಗಿದ್ದಾರೆ.
ಆಶ್ರಮದಲ್ಲಿ ಸಾಂಕೇತಿಕ ಮತ್ತು ಸರಳ ಔಪಚಾರಿಕ ಕಾರ್ಯಕ್ರಮದಲ್ಲಿ ಕಾರ್ಟರ್ ದಂಪತಿಗಳು ಮಕ್ಕಳಿಗೆ ಸಿಹಿ ವಿತರಿಸಿ ಬೋರ್ಡ್ ದೇಣಿಗೆ ನೀಡಿದರು. ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೈಟೆನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಾಯಿಕುಮಾರ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಆಶ್ರಮದ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


