HomeGadag Newsಡಿಜಿಟಲ್ ಲೈಫ್ ಪ್ರಮಾಣಪತ್ರ ಅಭಿಯಾನ

ಡಿಜಿಟಲ್ ಲೈಫ್ ಪ್ರಮಾಣಪತ್ರ ಅಭಿಯಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಅಂಚೆ ವಿಭಾಗ, ಭಾರತ ಅಂಚೆ ಪಾವತಿ ಬ್ಯಾಂಕ್ ಮತ್ತು ನಿವೃತ್ತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ, ನಿವೃತ್ತರಿಗಾಗಿ ಡಿಜಿಟಲ್ ಲೈಫ್ ಪ್ರಮಾಣಪತ್ರ (DLC) ಪಡೆಯುವ ಸುಲಭ ಹಾಗೂ ಸುಗಮ ಮಾರ್ಗವನ್ನು ಒದಗಿಸಲು ಡಿಜಿಟಲ್ ಲೈಫ್ ಪ್ರಮಾಣಪತ್ರ ಅಭಿಯಾನವನ್ನು ಪ್ರಾರಂಭಿಸಿದೆ. ಈ ಸೇವೆಯನ್ನು ನಿವೃತ್ತರು ತಮ್ಮ ಮನೆಗಳಲ್ಲಿಯೇ ಅಥವಾ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪಡೆಯಬಹುದಾಗಿದೆ.

ಈ ಸೇವೆಯಲ್ಲಿ ನಿವೃತ್ತರು ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಮುಖದ ಗುರುತಿನಲ್ಲಿ ಮಾನ್ಯತಾ (Face Recognition) ಆಪ್ ಅಥವಾ ಬೆರಳಚ್ಚು ಸ್ಕ್ಯಾನಿಂಗ್ software ಮೂಲಕ ಪಡೆಯಬಹುದಾಗಿದೆ. ಈ ಸೇವೆ ಬಳಸಲು ನಿವೃತ್ತರು ತಮ್ಮ ಆಧಾರ್ ಹಾಗೂ ಪಿಂಚಣಿ ವಿವರಗಳನ್ನು ಒದಗಿಸಿ, ಸೇವಾ ಶುಲ್ಕ ರೂ. 70 ನೀಡಬೇಕು. ಪ್ರಕ್ರಿಯೆ ಪೂರ್ಣಗೊಳ್ಳಲು, ನಿವೃತ್ತರು ತಮ್ಮ ಮೊಬೈಲ್‌ಗೆ ಸ್ವೀಕೃತಿ ರಶೀದಿ ಪಡೆಯಲಿದ್ದು, ಎರಡು ದಿನಗಳ ನಂತರ, ಅಧಿಕೃತ ವೆಬ್‌ಸೈಟ್‌ನಲ್ಲಿ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ.

2024ರ ನವೆಂಬರ್ 30ರವರೆಗೆ ಈ ಸೇವೆ ಗದಗ ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಲಭ್ಯವಿರುತ್ತದೆ. ಜೊತೆಗೆ, ವಿಶೇಷ ಅಭಿಯಾನಗಳು ರೋಣ ಅಂಚೆ ಕಚೇರಿ-ನವೆಂಬರ್ 8, ಮುಂಡರಗಿ ಅಂಚೆ ಕಚೇರಿ -ನವೆಂಬರ್ 8, ಶಿರಹಟ್ಟಿ ಅಂಚೆ ಕಚೇರಿ -ನವೆಂಬರ್ 16, ಲಕ್ಷ್ಮೇಶ್ವರ ಅಂಚೆ ಕಚೇರಿ-ನವೆಂಬರ್ 16, ಗಜೇಂದ್ರಗಡ ಅಂಚೆ ಕಚೇರಿ -ನವೆಂಬರ್ 25, ನರಗುಂದ ಅಂಚೆ ಕಚೇರಿ -ನವೆಂಬರ್ 25, ಗದಗ ಪ್ರಧಾನ ಅಂಚೆ ಕಛೇರಿ -ನವೆಂಬರ್ 30ರವರೆಗೆ ಎಲ್ಲಾ ಕೆಲಸದ ದಿನಗಳಲ್ಲಿ ನಡೆಯಲಿವೆ.

ಈ ವಿಶೇಷ ಕಾರ್ಯಕ್ರಮಗಳನ್ನು ನಿವೃತ್ತರು ಈ ಸೇವೆ ಸುಲಭವಾಗಿ ಬಳಸುವಂತೆ ಮಾಡಲು ಯೋಜಿಸಲಾಗಿದ್ದು, ಗದಗ ಅಂಚೆ ವಿಭಾಗದ ಅಧೀಕ್ಷಕರು ಎಲ್ಲಾ ನಿವೃತ್ತರಿಗೆ ಈ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!