ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ ಗದಗದಿಂದ ಧರ್ಮಸ್ಥಳ ಹಾಗೂ ಮಂಗಳೂರು ನಗರಕ್ಕೆ ನೇರ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಗದಗ ಮಾರ್ಗವಾಗಿ ಹೊರಡುವ ಬಸ್ ಲಕ್ಷ್ಮೇಶ್ವರ, ಹಾವೇರಿ, ರಾಣೇಬೆನ್ನೂರು, ಹರಿಹರ, ಶಿವಮೊಗ್ಗ, ಕಡೂರು, ಉಡುಪಿ, ಚಿಕ್ಕಮಗಳೂರು, ಉಜಿರೆ, ಧರ್ಮಸ್ಥಳಕ್ಕೆ ತಲುಪುವ 2 ಬಸ್‌ಗಳು ಪ್ರತಿದಿನ ಸಂಜೆ 7 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡಲಿದೆ. ಬಸ್‌ನ ಪ್ರಯಾಣದ ದರ 455 ರೂಪಾಯಿ ಇರುತ್ತದೆ.
ಗದಗ ಮಾರ್ಗವಾಗಿ ಹೊರಡುವ ಬಸ್ ಹುಬ್ಬಳ್ಳಿ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರಿಗೆ ತಲುಪುವ 2 ಬಸ್‌ಗಳು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡಲಿದ್ದು, ಬಸ್‌ನ ಪ್ರಯಾಣದ ದರ 472 ರೂಪಾಯಿ ಇರುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಗ್ಯಾರಂಟಿ ಸಮಿತಿ ಸದಸ್ಯರಾದ ಕೆ.ಎಚ್. ಪಾಟೀಲ್, ಮೀನಾಕ್ಷಿ ಬೆನಕಣ್ಣವರ, ಸಾವಿತ್ರಿ ಹೂಗಾರ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಪರಶುರಾಮ್ ವೈ. ಗಡೆದ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಂದ್ರಶೇಖರ ಇಟಗಿ, ವಿಭಾಗೀಯ ಸಂಚಾರಾಧಿಕಾರಿ ಪಿ.ವಿ. ಮೆತ್ರಿ, ಗದಗ ಡಿಪೋ ಮ್ಯಾನೇಜರ್ ಬಿ.ಎಲ್. ಗೆನ್ನೂರು, ಬೆಟಗೇರಿ ಡಿಪೋ ಮ್ಯಾನೇಜರ್ ರೋಹಿಣಿ ಆರ್.ಬಿ, ನಿಲ್ದಾಣಾಧಿಕಾರಿ ಎಂ.ಬಿ. ತಿಮ್ಮನಗೌಡ್ರು, ಸಾರಿಗೆ ನಿಯಂತ್ರಕರಾದ ಎಸ್.ಎಫ್. ಸಂಗಣ್ಣನವರ, ಎ.ಎಸ್. ಅಂಗಡಿ, ಬಿ.ಎನ್. ಪಾಟೀಲ್, ಎಸ್.ಎನ್. ಕಡೆಮನಿ ಉಪಸ್ಥಿತರಿದ್ದರು.



