ವಿಜಯಸಾಕ್ಷಿ ಸುದ್ದಿ, ಗದಗ: ಬಜೆಟ್ ಅಂದ ತಕ್ಷಣ ಉತ್ಸಾಹ, ಉಲ್ಲಾಸ, ವಿಶ್ವಾಸ ಎಲ್ಲ ವರ್ಗದಲ್ಲಿಯೂ ಮೂಡಬೇಕು. ಆದರೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರನ್ನು ಕಡೆಗಣಿಸಲಾಗಿದೆ. ಸಾಲ ಮಾಡುವ ಯೋಜನೆ ಹೊಂದಿದ್ದು, ನಮ್ಮ ಭಾರತ ಜಿಡಿಪಿ ಬಗ್ಗೆ ಕಾಳಜಿಯೇ ಇಲ್ಲ ಎಂದು ಕೆಪಿಸಿಸಿ ಗದಗ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿ ಖಂಡಿಸಿದ್ದಾರೆ.
ಬಜೆಟ್‌ನಿಂದ ಶೇರು ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಬಡವರು, ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯ ಹಾಗೂ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಯೋಜನೆಗಳಿಗೆ ಯಾವುದೇ ಹಣವಿಲ್ಲ, ಮಧ್ಯಮ ವರ್ಗದವರಿಗೆ ಮಣ್ಣು, ಬಂಡವಾಳ ಹೂಡಿಕೆದಾರರಿಗೆ ಹೆದರಿ ಹೃದಯಾಘಾತಕ್ಕೆ ಒಳಗಾಗುವಂತೆ ಇರುವ ದಿಕ್ಕು-ದೆಸೆಯಿಲ್ಲದ ಬಜೆಟ್ ಇದಾಗಿದೆ ಎಂದಿದ್ದಾರೆ.



