ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಟ, ನಿರ್ದೇಶಕ ನಾಗಶೇಖರ್ ಅವರ ಕಾರು ಇಂದು ಬೆಂಗಳೂರಿನಲ್ಲಿ ಅಪಘಾತಕ್ಕೆ ಈಡಾಗಿದೆ.
ನಾಗಶೇಖರ್ ಚಾಲನೆ ಮಾಡುತ್ತಿದ್ದ ಸೆಡಾನ್ ಕಾರು ಆಯತಪ್ಪಿ ಫುಟ್ಪಾತ್ ಮೇಲೆ ಹರಿದು ಫುಟ್ತಾಪ್ನಲ್ಲಿದ್ದ ಮರಕ್ಕೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ, ಸ್ವತಃ ನಾಗಶೇಖರ್ಗೆ ಸಹ ಯಾವುದೇ ಗಾಯಗಳಾಗಿಲ್ಲ.
ಆದರೆ ಕಾರು ಭಾಗಷಃ ಜಖಂ ಆಗಿದೆ. ಕಾರಿನ ಮುಂಭಾಗಕ್ಕೆ ತೀವ್ರ ಏಟಾಗಿದೆ. ಕಾರಿನ ಬದಿಯಲ್ಲಿಯೂ ಸಹ ಏಟಾಗಿದೆ. ಅಪಘಾತವಾದ ಸ್ಥಳದಲ್ಲಿ ಇದ್ದ ಕೆಲವು ಸ್ಥಳೀಯರು ನಿರ್ದೇಶಕ ನಾಗಶೇಖರ್ಗೆ ಸಹಾಯ ಮಾಡಿದ್ದಾರೆ.
ಸಂಚಾರಿ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ, ಸಹಾಯ ಮಾಡಿದ್ದಾರೆ. ಅಪಘಾತದ ವೇಳೆ ಓರ್ವ ಮಹಿಳೆಗೆ ಗಾಯವಾಗಿದೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದೆ.
ಅಪಘಾತದ ಬಳಿಕ ನಾಗಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕಂಟ್ರೋಲ್ ತಪ್ಪಿ ಪುಟ್ ಪಾತ್ ಮೇಲೆ ಕಾರು ಹತ್ತಿದೆ. ಅದೃಷ್ಟವಶಾತ್ ಏನೂ ಆಗಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ ಎಂದು ನಾಗಶೇಖರ್ ಹೇಳಿದ್ದಾರೆ.