ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದು ಭಾರತೀಯ ಸೈನಿಕರು ಪಾಕಿಸ್ತಾನದ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ನಿರ್ದೇಶಕ ರಾಜಮೌಳಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡದಂತೆ ಮನವಿ ಮಾಡಿದ್ದಾರೆ.
ಭಾರತೀಯ ಸೇನೆಗೆ ಸಂಬಂಧಪಟ್ಟ ಯಾವುದೇ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಬೇಡಿ. ಅವುಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ಶತ್ರುಗಳಿಗೆ ಸಹಾಯವಾಗಬಹುದು. ಪರಿಶೀಲಸದೇ ಯಾವುದೇ ಸುದ್ದಿಗಳನ್ನು ಶೇರ್ ಮಾಡೋದನ್ನು ನಿಲ್ಲಿಸಿ. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ. ಶಾಂತವಾಗಿ, ಜಾಗೃತೆಯಾಗಿ, ಸಕರಾತ್ಮಕವಾಗಿರೋಣ. ಗೆಲುವು ನಮ್ಮದೇ ಎಂದು ಬರೆದುಕೊಂಡಿದ್ದಾರೆ.
ನಮ್ಮ ದೇಶವನ್ನು ಭಯೋತ್ಪಾದನೆಯಿಂದ ರಕ್ಷಿಸುವಲ್ಲಿ ಅಚಲ ಧೈರ್ಯ ತೋರಿದ ನಮ್ಮ ಭಾರತೀಯ ಸಶಸ್ತ್ರ ಪಡೆಗಳಿಗೆ ನಮನಗಳು. ಶಾಂತಿ ಮತ್ತು ಏಕತೆಗಾಗಿ ಒಂದು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲೋಣ ಎಂದು ಎಕ್ಸ್‌ನಲ್ಲಿ ರಾಜಮೌಳಿ ಬರೆದುಕೊಂಡಿದ್ದಾರೆ.