ಶಿವಾಜಿ ಬಯೋಪಿಕ್ ಸಿನಿಮಾ ನಿಂತಿದ್ದಕ್ಕೆ ಕಾರಣ ತಿಳಿಸಿದ ನಿರ್ದೇಶಕ

0
Spread the love

ಛತ್ರಪತಿ ಶಿವಾಜಿ ಮಹಾರಾಜ್ ಕುರಿತು ಸಿನಿಮಾ ಮಾಡಲು ನಿರ್ದೇಶಕ ಅಮಿತ್‌ ರೈ ಮುಂದಾಗಿದ್ದಾರೆ. ಆರಂಭಕ್ಕೂ ಮುನ್ನವೇ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಗೆ ಶಾಹಿದ್‌ ಕಪೂರ್‌ ಹೀರೋ ಎಂದು ನಿಶ್ಚಯವಾಗಿತ್ತು. ಆದರೆ ಈದೀಗ ಸಿನಿಮಾ ನಿಂತು ಹೋಗಿದ್ದು ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕರು ತಿಳಿಸಿದ್ದಾರೆ.

Advertisement

‘ಬಾಕ್ಸ್ ಆಫೀಸ್​ನಲ್ಲಿ ಯಾವುದು ಗೆಲ್ಲುತ್ತಿದೆ ಎಂಬುದರ ಮೇಲೆ ಮಾತ್ರ ನಟರು ಕೆಲಸ ಮಾಡುತ್ತಾರೆ. ಕೆಲವು ನಟರು ಮಾತ್ರ ನನ್ನ ಜೊತೆ ಪ್ರಾಮಾಣಿಕವಾಗಿ ಇದ್ದಾರೆ. ಸಮಾಜದ ಬಗ್ಗೆ ಮಾತನಾಡುವ ಸಿನಿಮಾಗಳಲ್ಲಿ ನಟಿಸಲು ಕಲಾವಿದರಿಗೆ ಆಸಕ್ತಿ ಇಲ್ಲ. ಅದರ ಬದಲು ಲವ್ \ಸ್ಟೋರಿ ಮಾಡಬೇಕು ಎನ್ನುತ್ತಾರೆ. ನಾನು ಲವ್ ಸ್ಟೋರಿ ತೆಗೆದುಕೊಂಡು ಹೋದಾಗ ಇದು ದುಬಾರಿ ಆಯ್ತು ಎನ್ನುತ್ತಾರೆ. ಅವರ ಮಾನದಂಡ ಬದಲಾಗುತ್ತಲೇ ಇರುತ್ತದೆ. ನೀವು ಅವರ ಸರ್ಕಲ್​ನಲ್ಲಿ ಇದ್ದರೆ ಮಾತ್ರ ನೀವು ಹೇಳಿದ್ದನ್ನು ಒಪ್ಪಿಕೊಳ್ಳುತ್ತಾರೆ’ ಎಂದು ಅಮಿತ್ ರೈ ಹೇಳಿದ್ದಾರೆ.

ತಾವು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಅಮಿತ್ ರೈ ಹೊರ ಹಾಕಿರುವ ನಿರ್ದೇಶಕ ಅಮಿತ್‌ ರೈ ತಮ್ಮ ಮುಂದಿನ ಸಿನಿಮಾವನ್ನು ತಾವೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಇವರ ಈ ಪ್ರಯತ್ನಕ್ಕೆ ಸ್ನೇಹಿತರು ಸಾಥ್‌ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here