ಕೊಪ್ಪಳ:– ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗು ದುರಂತ ಅಂತ್ಯ ಕಂಡಿರೋ ಘಟನೆ ಜರುಗಿದೆ.
Advertisement
ಪ್ರಶಾಂತಿ ಸ್ಥಳದಲ್ಲೇ ಜೀವ ಬಿಟ್ಟ ಮಗು. ಘಟನೆಯಲ್ಲಿ ಮಗುವಿನ ತಾಯು 28 ವರ್ಷದ ಹನುಮಂತಿ, 65 ವರ್ಷದ ದುರಗಮ್ಮ, 19 ವರ್ಷದ ಭೀಮಮ್ಮ, 46 ವರ್ಷದ ಫಕೀರಪ್ಪ ಗಾಯಗೊಂಡಿದ್ದಾರೆ. ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಯು.ನಾಗರಾಜ್ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.