ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಎ.ಪಿ.ಎಮ್.ಸಿ ಯಾರ್ಡ್ ಆವರಣದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಗುರು ಪೂರ್ಣಿಮೆ ನಿಮಿತ್ತ ಕರುನಾಡಿನ ಶ್ರೇಷ್ಠ ಯತಿಗಳು ಹಾಗೂ ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜರಿಂದ ಜುಲೈ 19ರಂದು ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾಗಿದ್ದು, ಜುಲೈ 21ರವರೆಗೆ ಪ್ರತಿದಿನ ಸಂಜೆ 6.45ರಿಂದ 7.45ರವರೆಗೆ ಏರ್ಪಡಿಸಲಾಗಿದೆ.
Advertisement
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಆಶ್ರಮದ ಭಕ್ತರು ಆಗಮಿಸಿ ದಿವ್ಯತ್ರೇಯ ಕೃಪೆಗೆ ಪತ್ರರಾಗಬೇಕಾಗಿ ಆಶ್ರಮದ ಪರವಾಗಿ ರಾಮಚಂದ್ರ ಕುಲಕರ್ಣಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.