ವಿಜಯಸಾಕ್ಷಿ ಸುದ್ದಿ, ಮುಳಗುಂದ: ಯೋಗದಿಂದ ರೋಗಮುಕ್ತ ಜೀವನ ಸಾಗಲು ಸಾಧ್ಯವಾಗುತ್ತದೆ ಎಂದು ಪ.ಪಂ ಸದಸ್ಯ ವಿಜಯ ನೀಲಗುಂದ ಹೇಳಿದರು.
Advertisement
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದಲ್ಲಿ ಶ್ರೀಮನ್ನಿರಂಜನ ಯಳಂದೂರ ಬಸವಲಿಂಗ ಮಾಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಉಚಿತ ಆರೋಗ್ಯ-ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.’
ನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕಳೆದ 11 ವರ್ಷಗಳಿಂದ ಉಚಿತ ಯೋಗ ತರಬೇತಿಯನ್ನು ನಡೆಸುತ್ತಿರುವ ಪ್ರಕಾಶ ಮದ್ದಿನರ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಡಾ. ಎಸ್.ಸಿ. ಚವಡಿ ವಹಿಸಿದ್ದರು. ಮಂಜುನಾಥ ಮಟ್ಟಿ, ಸಿದ್ದಲಿಂಗೇಶ ಕುರ್ತಕೋಟಿ, ಕೆ.ಎಂ. ಹೆರಕಲ್ಲ, ಮಾಹಾಂತೇಶ ನಪೂರಿಮಠ, ಶೋಭಾ ಪಾಟೀಲ, ರಾಜೇಶ್ವರಿ ಬಡ್ನಿ, ಯೋಗ ಗುರು ಪ್ರಕಾಶ ಮದ್ದಿನ ಇದ್ದರು.