ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿನಿತ್ಯ ಯೋಗ ಮಾಡುವುದರಿಂದ ರೋಗ ಮುಕ್ತ ಜೀವನ ಸಾಧ್ಯ ಎಂದು ಎಂ. ಎಂ. ಕೊಪ್ಪಳ ಹೇಳಿದರು.
ಪಟ್ಟಣ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿ ಹರ್ಷವರ್ಧನ ಕೊಲ್ಲಾರಿ ಗೊಕಾಕದಲ್ಲಿ ಕರ್ನಾಟಕ ಸ್ಟೇಟ್ ಅಮೆಚೂರ್ ಸ್ಪೋರ್ಟ್ಸ್ ಅಸೋಸಿಯೇಶನ್ ಹಾಗೂ ಸತೀಶ ಜಾರಕಿಹೊಳಿ ಪೌಂಡೆಶನ್ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಕ್ಕಳು ನಿತ್ಯ ಯೋಗಾಸನ ಮಾಡಬೇಕು. ಇದರಿಂದ ದೈಹಿಕ-ಮಾನಸಿಕವಾಗಿ ಸದೃಢರಾಗಲು ಸಹಾಯಕವಾಗುತ್ತದೆ ಎಂದರು.
ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡ್ರ, ಎಂ. ಎಂ. ಮೇಗಲಮನಿ, ಕೆ.ಎಂ. ಹೆರಕಲ್ಲ, ಮಂಜುನಾಥ ಕಲ್ಯಾಣಮಠ, ಎಸ್.ಎಚ್. ಉಪ್ಪಾರ, ಎಚ್.ಆರ್. ಬಜೆಂತ್ರಿ, ಎಸ್.ವಿ. ಹಿರೇಮಠ, ವಿ.ಎಂ. ಕಂಠಿ, ಟಿ.ವೀಣಾ, ಎಸ್.ಡಿ. ಪಂಡಿತ, ನಂದಾ ಮಟ್ಟಿ, ಜ್ಯೋತಿ ಜಾಧವ, ಪವಿತ್ರಾ ಮಟ್ಟಿ, ರೇಣುಕಾ ಪರ್ವತಗೌಡ್ರ ಇದ್ದರು.