ವಿಜಯನಗರ : ವಿವಾಹಿತೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ದುಷ್ಟನೊಬ್ಬ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗಿದ್ದ 7 ವರ್ಷದ ಮಗುವನ್ನು ಕಾಲುವೆಗೆ ಎಸೆದು ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಜರುಗಿದೆ.
ಕಮಲಾಪುರ ಗ್ರಾಮದ ಎಚ್ ಎಲ್ ಸಿ ಕಾಲುವೆಗೆ ಮಗು ಎಸೆದು ಹತ್ಯೆ ಮಾಡಲಾಗಿದೆ. 7 ವರ್ಷದ ಅಭಿ ಸಾವನ್ನಪ್ಪಿರೋ ಬಾಲಕ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಮೂರು ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಕೊಲೆ ಆರೋಪಿ 24 ವರ್ಷದ ಓಬಳೇಶ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಾಲೆಗೆ ಹೋಗಿದ್ದ ಮಗುವನ್ನ ವಾಪಸ್ ಮನೆಗೆ ಕರೆತರುವಾಗ
ದುರುಳ ಓಬಳೇಶ್ ಕಾಲುವೆಗೆ ಎಸೆದಿದ್ದಾನೆ.
ಮನೆಗೆ ಬಂದು ಮಗು ಕಾಣ್ತಿಲ್ಲ ಅಂತಾ ಪ್ರೇಯಸಿಗೆ ಓಬಳೇಶ್ ಸುಳ್ಳು ಕಥೆ ಕಟ್ಟಿದ್ದ. ಗಂಡನಿದ್ರೂ ಗಂಡನನ್ನ ತೊರೆದು ಪ್ರಿಯತಮನೊಂದಿಗೆ ಪ್ರೇಯಸಿ ಅಕ್ರಮ ಸಂಬಂಧದ ಜೀವನ ನಡೆಸುತ್ತಿದ್ದಳು. ಪ್ರೇಯಸಿ ಹಾಗೂ ಮೊದಲ ಗಂಡನಿಗೆ ಜನಿಸಿದ ಮಗುವಾದ ಹಿನ್ನೆಲೆ ದುರುಳ ಓಬಳೇಶ್ ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.