ಎಲ್ಲೇ ಹೋದರು ಒಟ್ಟೊಟ್ಟಿಗೆ ಹೋಗುತ್ತಿದ್ದ ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ ದೂರ ದೂರವಾಗಿದ್ದಾರೆ. ಇನ್ನೆನ್ನೂ ಹಸೆಮಣೆ ಏರೇ ಬಿಟ್ರು ಅನ್ನುವಾಗಲೇ ಇಬ್ಬರು ಪ್ರೀತಿಗೆ ಗುಡ್ ಬಾಯ್ ಹೇಳಿ ನಾನೊಂದು ತೀರಾ, ನೀನೊಂದು ತೀರಾ ಅಂತಿದ್ದಾರೆ. ಅಷ್ಟಕ್ಕೂ ಪ್ರಣಯ ಪಕ್ಷಿಗಳಂತಿದ್ದವರು ದೂರವಾಗಿದ್ದೇಕೆ ಗೊತ್ತಾ?
ಹಲವು ದಿನಗಳಿಂದ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಕಳೆದ ವಾರವಷ್ಟೇ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಿಂದ ಇಬ್ಬರು ಜೊತೆ ಜೊತೆಗಿದ್ದ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಇಬ್ಬರು ಪರಸ್ಪರ ಒಪ್ಪಿಗೆಯಿಂದಲೇ ದೂರ ಆಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಸ್ನೇಹಿತರಾಗಿ ಇರೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಲಸ್ಟ್ ಸ್ಟೋರೀಸ್ 2 ಸಿನಿಮಾದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಜೊತೆಯಾಗಿ ನಟಿಸಿದ್ದರು. ಎರಡು ವರ್ಷಗಳ ಹಿಂದೆ 2023ರ ಆರಂಭದಲ್ಲೇ ಇಬ್ಬರ ಲವ್ ವಿಚಾರ ಬಹಿರಂಗ ಆಗಿತ್ತು. ಇಬ್ಬರು ಮದುವೆ ಆಗುತ್ತಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ ಅದಕ್ಕೂ ಮುನ್ನವೇ ಇಬ್ಬರು ಬೇರೆ ಬೇರೆಯಾಗಿದ್ದು ಇದು ಇಬ್ಬರ ಅಭಿಮಾನಿಗಳಿಗೆ ಶಾಕ್ ಆಗಿದೆ.



