ಜೂ.8ರಂದು ಅಸ್ತಮಾ ಔಷಧಿ ವಿತರಣೆ

0
Distribution of asthma medicine on June 8
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲ್ಲಿ ಆಯುರ್ವೇದಿಕ್ ಔಷಧಿಗಳನ್ನು ನೀಡುತ್ತಾ ದೇಶದ ಉದ್ದಗಲಕ್ಕೂ ಲಕ್ಷ್ಮೇಶ್ವರದ ಕೀರ್ತಿಯನ್ನು ಬೆಳಗುತ್ತಿರುವ ಖ್ಯಾತ ಆಯುರ್ವೇದ ತಜ್ಞವೈದ್ಯ ದಿ. ಬಾಬುರಾವ್ ಕುಲಕರ್ಣಿ ಓರ್ವರಾಗಿದ್ದರು.

Advertisement

ಮನುಷ್ಯನ ದೇಹದಲ್ಲಿ ಕಫದ ಅಂಶ ಜಾಸ್ತಿಯಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ. ಇಂತಹ ರೋಗ ವಾಸಿಯಾಗಲಾರದೆಂಬ ಭಯ ಎಲ್ಲ ರೋಗಿಗಳಲ್ಲಿ ಕಾಡುತ್ತದೆ. ಇದಕ್ಕೆ ಕಳೆದ 58 ವರ್ಷಗಳಿಂದ ಉಚಿತವಾಗಿ ಅಸ್ತಮಾ ಔಷಧಿಯನ್ನು ನೀಡುತ್ತಿದ್ದ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಈ ರೋಗವನ್ನು ಹೋಗಲಾಡಿಸಬಹುದು ಎಂದು ರುಜುವಾತು ಮಾಡಿದ್ದಾರೆ.

ದಿ.ವೈದ್ಯ ಬಾಬುರಾವ ಕುಲಕರ್ಣಿ ಅಂದಿನ ದಿನಗಳಲ್ಲಿ ಪ್ರಖ್ಯಾತ ಆಯುರ್ವೇದ ವೈದ್ಯರೆನಿಕೊಂಡಿದ್ದ ಹನುಮಂತಪ್ಪ ಮುರಗೋಡ ಎಂಬುವರ ಬಳಿ ಅನೇಕ ಆಯುರ್ವೇದ ಔಷಧಿಗಳನ್ನು ನೀಡುವ ಬಗ್ಗೆ ಸಂಪೂರ್ಣವವಾಗಿ ಕಲಿತುಕೊಂಡರು. ಇದರಲ್ಲಿ ಹೆಚ್ಚು ಅಭ್ಯಾಸ ಮಾಡಬೇಕು, ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದ ಅವರು, ಅನೇಕ ಬೆಟ್ಟ-ಗುಡ್ಡಗಳನ್ನು ಅಲೆದರು. ಹಿಮಾಲಯ, ಕಾಶ್ಮೀರ, ಕನ್ಯಾಕುಮಾರಿ ಹೀಗೆ ಅನೇಕ ಕಡೆಗಳಲ್ಲಿ ಪ್ರವಾಸ ಮಾಡಿ ಹೊಸ ವನಸ್ಪತಿಯನ್ನ ಸಂಗ್ರಹಿಸಿ ಜನರಿಗೆ ಅತಿ ತೊಂದರೆದಾಯಕ ಎನಿಸಿರುವ ಅಸ್ತಮಾ ರೋಗಕ್ಕೆ ಔಷದಿಯನ್ನು ಕಂಡು ಹಿಡಿದು ಇಲ್ಲಿಯವರೆಗೆ ಲಕ್ಷಾಂತರ ರೋಗಿಗಳನ್ನು ಗುಣಪಡಿಸಿದ ಕೀರ್ತಿ ಈ ಔಷಧಿಗಿದೆ.

ಇಲ್ಲಿಗೆ ಔಷಧಿಗೆ ಬರುವವವರಲ್ಲಿ ಗೋವಾ, ತಮಿಳುನಾಡು, ಆಂದ್ರ, ಕೇರಳ, ಉ.ಪ್ರದೇಶ, ದೆಹಲಿ, ಮುಂಬೈ, ಮಹರಾಷ್ಟç ಮುಂತಾದ ರಾಜ್ಯಗಳ ಜನರ ಸಂಖ್ಯೆ ದೊಡ್ಡದು. ಇಲ್ಲಿ ಔಷಧಿಯನ್ನು ಪಡೆಯುವ ಮೂಲಕ ಗುಣಮುಖರಾಗುತ್ತಿದ್ದಾರೆ. ಆದರೆ 54 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿರುವ ಬಾಬುರಾವ್ ಕುಲಕರ್ಣಿಯವರ ಈ ಸೇವೆ ನಿರಂತರವಾಗಿ ನಡೆಯಲಿದ್ದು, ಅವರ ಶಿಷ್ಯವೃಂದ ಈ ಸೇವೆಯನ್ನು ಉಚಿತವಾಗಿ ಮುಂದುವರೆಸಿಕೊಂಡು ಹೋಗಲಿದ್ದಾರೆ.

ಈ ಆಯುರ್ವೇದ ಔಷಧಿಯನ್ನು ರೋಗ ಪ್ರಾರಂಭವಾಗುವ ಕಾಲಕ್ಕೆ ಅಂದರೆ ಮೃಗಶಿರ ಮಳೆಯ ನಕ್ಷತ್ರ ಪ್ರವೇಶ ಕಾಲಕ್ಕೆ ಸೇವಿಸುವದರಿಂದ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಈ ವರ್ಷ ಜೂನ್ 8ರಂದು ಶನಿವಾರ ಮುಂಜಾನೆ 7.11ಕ್ಕೆ ಮೃಗಶಿರಾ ಮಳೆಯ ನಕ್ಷತ್ರ ಕಾಲದಲ್ಲಿ ಔಷಧಿ ನೀಡಲಾಗುತ್ತಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರದ ಹಿರೇಬಣದ ಹಳೆ ಪೊಲೀಸ್ ಠಾಣೆಯ ಹತ್ತಿರವಿರುವ ಸರಕಾರಿ ಪ್ರಾಥಮಿಕ ಶಾಲೆ ನಂ.1ರಲ್ಲಿ ಉಚಿತವಾಗಿ ಔಷಧಿಯನ್ನು ವಿತರಿಸಲಾಗುತ್ತಿದೆ. ಔಷಧಿ ಪಡೆಯಲಿಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಡಾ.ಹರೀಶ ಕುಲಕರ್ಣಿ -9148652908,9481008958 ಇವರನ್ನು ಸಂಪರ್ಕಿಸಬಹುದು.

ಅಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ವಹಿಸಲಿದ್ದು, ಅನೇಕ ಆಯುರ್ವೇದ ಪಂಡಿತರು, ವೈದ್ಯರು ಆಗಮಿಸಿ ಸಲಹೆ ಸೂಚನೆ ನೀಡಲಿದ್ದಾರೆ.

 


Spread the love

LEAVE A REPLY

Please enter your comment!
Please enter your name here