ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸೊರಟೂರ ಗ್ರಾಮದ ಹುಸೇನಸಾಬ ದಾವಲಸಾಬ ಬಾಬುಖಾನವರ ಇವರ ದನದ ಶೆಡ್ಡಿಗೆ ವಿದ್ಯುತ್ ಅವಘಡÀದಿಂದ ಬೆಂಕಿ ತಗುಲಿ, ಒಂದು ಎತ್ತು ಮರಣಹೊಂದಿದ್ದು,ಒಂದು ಎತ್ತು, ಒಂದು ಎಮ್ಮೆ ಗಾಯಗೊಂಡಿದ್ದವು. ಹಾನಿಗೊಳಗಾದ ರೈತ ಹುಸೇನಸಾಬ ಬಾಬುಖಾನವರಿಗೆ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು 90 ಸಾವಿರ ರೂಪಾಯಿಗಳ ಪರಿಹಾರದ ಚೆಕ್‌ನ್ನು ವಿತರಿಸಿದರು.
Advertisement
ಈ ಸಂದರ್ಭದಲ್ಲಿ ಗದಗ ವಿಭಾಗದ ಹೆಸ್ಕಾಂ ಇಂಜಿನಿಯರ್ ರಾಜೇಶ ಕಲ್ಯಾಣಶೆಟ್ಟರ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಸಿದ್ದಲಿಂಗೇಶ್ವರ ಪಾಟೀಲ, ಸೊರಟೂರ ಗ್ರಾ.ಪಂ ಸದಸ್ಯರಾದ ಮರಿಯಪ್ಪ ಹ.ಸಣ್ಣತಂಗಿಯವರ, ಮೌಲಾಸಾಬ ದಾ.ಬಾಬುಖಾನವರು ಉಪಸ್ಥಿತರಿದ್ದರು.