ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕೆರೆಹಳ್ಳಿ ಗ್ರಾಮದ ನಿಂಗಪ್ಪ ಹೊಳೆಯಪ್ಪ ಮೇವುಂಡಿ ಇವರ ಜಮೀನಿನಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಳೆಯು ಬೆಂಕಿಯಿಂದ ನಾಶಗೊಂಡಿತ್ತು. ಈ ಬಗ್ಗೆ ಶಾಸಕ ಡಾ. ಚಂದ್ರು ಲಮಾಣಿ ಹೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಸತತ ಪ್ರಯತ್ನದಿಂದಾಗಿ ಹೆಸ್ಕಾಂನಿಂದ ಕೊಡಮಾಡಿದ 372000 ರೂ ಪರಿಹಾರಧನದ ಚೆಕ್‌ನ್ನು ರೈತರಿಗೆ ವಿತರಣೆ ಮಾಡಲಾಯಿತು.
ಹೆಸ್ಕಾಂ ಎಇಇ ಅಂಜನಪ್ಪ, ಅನಿಲಗೌಡ ಮಲಗೌಡ್ರ, ಗ್ರಾ.ಪಂ ಸದಸ್ಯರಾದ ಯಲ್ಲಪ್ಪ ಕಂಬಳಿ, ಪ್ರೇಮವ್ವ ಲಮಾಣಿ, ಭೀಮಪ್ಪ ಲಮಾಣಿ, ಪ್ರಶಾಂತ ಪಾಟಿ, ಶಿವಪ್ಪ ಕಾರಬಾರಿ, ಮಲ್ಲೇಶ ಲಮಾಣಿ, ಮಾಂತೇಶ ಲಮಾಣಿ, ಪ್ರಭಣ್ಣ ಬಗಲಿ, ವಾಸುದೇವ ತಳವಾರ, ಹನುಮಂತ ಮಾಚೇನಹಳ್ಳಿ, ಹನುಮಂತರೆಡ್ಡಿ ಬುಳ್ಳಪ್ಪನವರ, ಅಣ್ಣಪ್ಪ ರಣತೂರ, ಈರಣ್ಣ ಮರಡೂರ, ಕೊಟ್ರೇಶ ಮಾಚೇನಹಳ್ಳಿ, ಹಾಲಪ್ಪ ನಾವಿ, ಮಂಜಯ್ಯ ಹಿರೇಮಠ, ಕೊಟ್ರಯ್ಯ ಹಿರೇಮಠ, ದಾವಲಸಾಬ ನದಾಫ್, ಶಿವಪುತ್ರಪ್ಪ ಚನ್ನೂರ, ಶಿವಪುತ್ರಪ್ಪ ಹಲವಾಗಲಿ ಮುಂತಾದವರು ಉಪಸ್ಥಿತರಿದ್ದರು.