ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಭಾಗದಲ್ಲಿ ಅರ್ಹ ದಾಖಲಾತಿ ಹೊಂದಿರುವ ಆಸ್ತಿಗೆ ಇ-ಸ್ವತ್ತು ದಾಖಲೆ ನೀಡುವಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮೀಣ ಪ್ರದೇಶದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳದರು.
ಅವರು ಸೋಮವಾರ ಲಕ್ಷ್ಮೇಶ್ವರ ತಾಲೂಕಿನ ಮುನಿಯನ ತಾಂಡಾ ಕಂದಾಯ ಗ್ರಾಮದಲ್ಲಿ ಅರ್ಹರಿಗೆ ಇ-ಸ್ವತ್ತು (ಖಾತಾ) ವಿತರಿಸಿ ಮಾತನಾಡಿದರು.
ಅರ್ಹ ದಾಖಲೆಯುಳ್ಳ ಆಸ್ತಿಗಳನ್ನು ಗುರುತಿಸಿ ಇ-ಸ್ವತ್ತು ದಾಖಲೆ ವಿತರಿಸುವುದು ಗ್ರಾ.ಪಂ ಆಡಳಿತದ ಜವಾಬ್ದಾರಿಯಾಗಿದ್ದು, ಈ ಕಾರ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ, ಹೊರೆಯಾಗದಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಈ ವೇಳೆ ತಹಸೀಲ್ದಾರ್ ಧನಂಜಯ ಎಂ, ಕೃಷ್ಣಪ್ಪ ಧರ್ಮರ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಈಳಿಗೇರ, ಜಾನು ಲಮಾಣಿ, ತುಕ್ಕಪ್ಪ ಪೂಜಾರ, ಲಕ್ಷ್ಮಣ ಲಮಾಣಿ, ಶಿವಪ್ಪ ನಾಯಕ, ದೇವಪ್ಪ ಲಮಾಣಿ, ಕೀರಪ್ಪ ಲಮಾಣಿ, ನಿಂಗಪ್ಪ ಬಂಕಾಪುರ, ಸೋಮಣ್ಣ ಲಮಾಣಿ ಸೇರಿದಂತೆ ಗ್ರಾ.ಪಂ ಸದಸ್ಯರು, ಮುಖಂಡರು ಇದ್ದರು.