HomeGadag Newsವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ

ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬಲವರ್ಧನೆಗಾಗಿ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಸರ್ಕಾರಿ ಶಾಲೆ ನಂ. 6, 10 ಮತ್ತು ಗದಗ ಶಹರ ವಲಯದ ಶಾಲೆ ನಂ. 11ರಲ್ಲಿ ಒಟ್ಟು 160 ಪರೀಕ್ಷಾ ಪ್ಯಾಡ್‌ಗಳನ್ನು ಹಂಚಲಾಯಿತು.

ಸಂಸ್ಥೆಯ ಐಎಸ್‌ಓ ಪುಷ್ಪಾ ಭಂಡಾರಿಯವರ ವಿನೂತನ ಆಲೋಚನೆಯಂತೆ ಸಂಸ್ಥೆಯ ಎಲ್ಲ ಸದಸ್ಯರು ತಮ್ಮ ತಮ್ಮ ಮನೆಯಲ್ಲಿರುವ ರದ್ದಿ ಪೇಪರ್ ಮಾರಿ ಹಣ ಒಟ್ಟುಗೂಡಿಸಿ ಬಂದ ಹಣದಲ್ಲಿ 160 ಪರೀಕ್ಷಾ ಪ್ಯಾಡ್‌ಗಳನ್ನು ಖರೀದಿಸಿ ಹಂಚಲಾಯಿತು. ಜಿಲ್ಲಾ ಮಾಜಿ ಗವರ್ನರ್ ಪ್ರೇಮಾ ಗುಳಗೌಡರ ಈ ಯೋಜನೆಗೆ ಮಾರ್ಗದರ್ಶನ ನೀಡಿದರು. ಶಿಕ್ಷಣ ಮಾರ್ಗದರ್ಶಕರು ಹಾಗೂ ಸಂಪನ್ಮೂಲ ವ್ಯಕ್ಯಿಗಳಾದ ಕವಿತಾ ದಂಡಿನ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷರಾದ ನಾಗರತ್ನಾ ಮಾರನಬಸರಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿಗಳಾದ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಿಎಲ್‌ಸಿಸಿ ಸುಮಾ ಪಾಟೀಲ, ಸಂಗೀತಾ ಪಟ್ಟಣಶೆಟ್ಟಿ, ಶಾಲೆಗಳ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!