ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಡಾ. ಜಾಕೀರ್ ಹುಸೇನ್ ಕಾಲೋನಿಯ ಮುಸ್ಲಿಂ ಜಮಾತ್‌ನ ವತಿಯಿಂದ ಇತ್ತೀಚೆಗೆ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಆಹಾರ ಧಾನ್ಯ, ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಇಲ್ಲಿ ಅಭಿವೃದ್ಧಿಪಡಿಸುತ್ತಿರುವ ಹೊಸ ಖಬರಸ್ಥಾನವನ್ನು ಅಭಿವೃದ್ಧಿಪಡಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರಲ್ಲದೆ, ರಂಜಾನ್ ಹಬ್ಬದ ಪ್ರಯುಕ್ತ ಕಡು ಬಡವರಿಗೆ ಆಹಾರ ಧಾನ್ಯವನ್ನು ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಪ್ರಾಸ್ತಾವಿಕವಾಗಿ ಪ್ರೊ. ಎಂ.ಎಲ್. ಗುಳೇದಗುಡ್ಡ ಮಾತನಾಡಿ ಜಮಾತ್ ನಡೆದುಬಂದ ದಾರಿಯನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಬಿ. ಅಸೂಟಿ, ನಾಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ ಜಿ.ಎಂ. ದಂಡಿನ ಪಾಲ್ಗೊಂಡಿದ್ದರು.
ಮೌಲಾನಾ ಮುಫ್ತಿ ಸಾಬೀರ್ ಶಿರಗುಂಪಿ ಕುರ್ ಆನ್ ಪಠಿಸಿದರು. ಜಮಾತಿನ ಅಧ್ಯಕ್ಷರಾದ ಜನಾಬ ಶಾಬುದ್ದೀನ್ ಟೋಪಿವಾಲೆ ಸ್ವಾಗತಿಸಿದರು. ಧರ್ಮಬೋಧಕರಾದ ಅಣ್ಣಿಗೇರಿಯ ಅಬ್ದುಲ್ ಖಾದರ್‌ಸನ್ನು ಭಾಯಿಯವರು ಹಿತನುಡಿಗಳನ್ನಾಡಿದರು. ಎಂ.ಸಿ. ಶೇಖ ವಂದಿಸಿದರು.
ಹೊಸ ಖಬರಸ್ಥಾನ ಅಭಿವೃದ್ಧಿಗೆ ನರವು ನೀಡಿದ ಶಹಜಾದಬಿ ಕಟ್ಟಿಮನಿ, ಅಜಹರ್ ಗುಳೇದಗುಡ್ಡ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರದಲ್ಲಿ ಬೆಟಗೇರಿಯ ಬದರ್ ಮಸೂತಿಯ ಚೇರಮನ್ ಎಂ.ಎಂ ಮಾಳೆಕೋಪ್, ಖಾಲಿದ್ ಕೊಪ್ಪಳ, ಫಾರೂಕ್ ಹುಬ್ಬಳ್ಳಿ, ಚಾಂದಸಾಬ ಕೊಟ್ಟೂರ್, ತಯ್ಯಬಅಲಿ ಕುನ್ನಿಬಾವಿ, ಎಸ್.ಕೆ. ನದಾಫ್ ವಕೀಲರು, ಅಬ್ದುಲ್ ರೆಹಮಾನ್ ಹುಯಿಲಗೋಳ ಮುಂತಾದವರಿದ್ದರು.