ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸಮಾಜದಲ್ಲಿ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಸಂವಿಧಾನತ್ಮಾಕವಾಗಿ ಕಾನೂನು ಒಳಗೊಂಡAತೆ ತಮ್ಮ ವಿದ್ಯಾಭ್ಯಾಸಗಳ ಮೂಲಕ ತಮ್ಮ ಉತ್ತಮ ಉದ್ಯೋಗವನ್ನು ಪಡೆದು ನ್ಯಾಯಯುತವಾಗಿ ಅಭಿವೃದ್ಧಿ ಹೊಂದಬೇಕೆAದು ಕಿಮ್ಸ್ನ ನಿವೃತ್ತ ನಿರ್ದೇಶಕ ಡಾ. ಬಿ.ಎಸ್. ಮದಕಟ್ಟಿ ಹೇಳಿದರು.
ಇಲ್ಲಿನ ಮೋಚಿಗಾರ (ಮೋಚಿ) ಸಮಾಜದ ಪಿ.ಬಿ.ಎಮ್.ಎಸ್.ಇ.ಟಿ. ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಸುಶೀಲಕುಮಾರ ರೋಣದ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಸಾರ್ವತ್ರಿಕವಾಗಿ ಬೆಳೆಯಬೇಕಾದರೆ ಎಲ್ಲ ಸಮುದಾಯದ ಜೊತೆಗೆ ಬೆರೆತು ಬಾಳಬೇಕು. ಪೇ ಬ್ಯಾಕ್ ಟು ಮೋಚಿ ಸೊಸಾಯಿಟಿ’ಸ್ ಎಜುಕೇಶನಲ್ ಟ್ರಸ್ಟ್ ಹುಬ್ಬಳ್ಳಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡುವ ಮೂಲ ಉದ್ದೇಶವೇ ಸಮಾಜದ ಬಡ ಜನಾಂಗದ ಏಳಿಗೆಗಾಗಿ ಆರ್ಥಿಕ ಸಹಾಯ ನೀಡುವುದಾಗಿದೆ ಎಂದರು.
ಶರಣುಕುಮಾರ ಕೋಳೂರು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಬೋಧಿಸಿದರು. ವಿರೇಶ ಬಿಸನಳ್ಳಿ ಸಂವಿಧಾನದ ಪೀಠಿಕೆ ಓದಿಸಿದರು. ಮಹಾದೇವಪ್ಪ ಸ್ವಾಧಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ನ ಹುಬ್ಬಳ್ಳಿ ಅಧ್ಯಕ್ಷ ರಮೇಶ ಕೋಳೂರ ಮಾತನಾಡಿದರು. ಡಾ. ಕಿರಣಕುಮಾರ ತೇರಿಕೆರೆ ಸ್ವಾಗತಿಸಿದರೆ, ಫಕೀರಪ್ಪ ಎಸ್.ಬ್ಯಾಹಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಘು ಎಚ್ ವಂದಿಸಿದರು.