Homecultureಪ.ಪಂ ವತಿಯಿಂದ ಕನ್ನಡ ಬಾವುಟ ವಿತರಣೆ

ಪ.ಪಂ ವತಿಯಿಂದ ಕನ್ನಡ ಬಾವುಟ ವಿತರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕರ್ನಾಟಕ ರಾಜ್ಯೋತ್ಸವ ಕನ್ನಡಿಗರೆಲ್ಲರ ಹಬ್ಬ. ಕನ್ನಡ ರಾಜೋತ್ಸವವು ಕನ್ನಡ ನಾಡಿನ ಅಸ್ಮಿತೆಯಾಗಿದೆ. ಕನ್ನಡ ರಾಜ್ಯೋತ್ಸವವನ್ನು ವಿಧಾಯಕವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ.ಪಂ ಅಧ್ಯಕ್ಷ ಫಕ್ಕೀರಪ್ಪ ಮಳ್ಳಿ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ 1 ಸಾವಿರ ಕನ್ನಡ ಬಾವುಟಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ವರ್ಷ ವಿಶೇಷವಾಗಿ ನವೆಂಬರ್ 1ರಂದು ನರೇಗಲ್ಲ ಪ.ಪಂ ವತಿಯಿಂದ 1 ಸಾವಿರ ಕನ್ನಡ ಬಾವುಟಗಳನ್ನು ಪ.ಪಂ ಸದಸ್ಯರ ನೇತೃತ್ವದಲ್ಲಿ ಮನೆ ಮನೆಗಳ ಮೇಲೆ ಹಾರಿಸುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.

ನಿವೃತ್ತ ಶಿಕ್ಷಕ ಎಂ.ಎಸ್. ದಡೆಸೂರಮಠ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ.

ಭಾಷಾಭಿಮಾನ ಎಲ್ಲರಲ್ಲಿ ಮೂಡಬೇಕಿದೆ. ಎಲ್ಲರೂ ಕನ್ನಡತನವನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡವನ್ನು ಉಳಿಸುವ ಕಾರ್ಯವನ್ನು ಮಾಡಬೇಕು ಎಂದರು.

ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ. ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ, ಕನ್ನಡ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಮಹಾದೇವ ಬೇವಿನಕಟ್ಟಿ, ಕಸಾಪ ತಾಲೂಕಾ ಕಾರ್ಯದರ್ಶಿ ಬಸವರಾಜ್ ಕುರಿ, ಬೀಚಿ ಬಳಗದ ಸಂಚಾಲಕ ಈಶ್ವರ ಬೆಟಗೇರಿ, ಮುಖಂಡರಾದ ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ವೀರಪ್ಪ ಜೋಗಿ, ನಿಂಗಪ್ಪ ಚಲವಾದಿ, ಕಳಕನಗೌಡ ಪಾಟೀಲ, ಅಲ್ಲಾಭಕ್ಷಿ ನದಾಫ್, ಗುಡದಪ್ಪ ಗೋಡಿ, ಶೇಖಪ್ಪ ಕೆಂಗಾರ, ಸಕ್ರಪ್ಪ ಹಡಪದ, ಮುಖ್ಯಾಧಿಕಾರಿ ಮಹೇಶ್ ನಿಡಶೇಶಿ, ಶಂಕ್ರಪ್ಪ ದೊಡ್ಡಣ್ಣವರ, ವಿ.ವೈ. ಮಡಿವಾಳರ, ರಮೇಶ ಹಲಗಿ, ಎಂ.ಎಚ್. ಸೀತಿಮನಿ ಸೇರಿದಂತೆ ಪ.ಪಂ ಸಿಬ್ಬಂದಿ ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!