ಗದಗ:- ತಿನ್ನಲು ಯೋಗ್ಯವಲ್ಲದ ಕಳಪೆ ಗುಣಮಟ್ಟದ ರೇಷನ್ ಹಂಚಿಕೆಗೆ ಸಾರ್ವಜನಿಕರು ಕಿಡಿಕಾರಿರುವ ಘಟನೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಜರುಗಿದೆ.
Advertisement
ಪಡಿತರ ಚೀಟಿಗೆ ವಿತರಣೆ ಮಾಡುವ ಜೋಳದಲ್ಲಿ ಹಾಗೂ ಅಕ್ಕಿಯಲ್ಲಿ ಹುಳು ಕಂಡು ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿ ಗ್ರಾಹಕರಿಗೆ 3 ಕೆಜಿ ಜೋಳ ಕೊಡ್ತಾರೆ. ಆದರೆ ಗಲೀಜು ತುಂಬಿರೋ ಜೋಳ ವಿತರಣೆ ಮಾಡ್ತಿದ್ದಾರೆ.

ನಮ್ಮ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಕಳಪೆ ಗುಣಮಟ್ಟದ ರೇಷನ್ ಹಂಚಿಕೆ ಮಾಡ್ತಿರೋ ನ್ಯಾಯ ಬೆಲೆ ಅಂಗಡಿ ವಿರುದ್ಧ ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.


