ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ತಾಜುದ್ದೀನ ಕಿಂಡ್ರೀ ಅವರು ತಮ್ಮ ೪೫ನೇ ಜನ್ಮದಿನವನ್ನು ಭಾನುವಾರ ಮಾದರಿ, ವಿಶೇಷವಾಗಿ ಆಚರಿಸಿಕೊಂಡರು.
ಮುಳಗುಂದದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ಹಾಗೂ ನಿರ್ಗತಿಕ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ತಿಳಿದು, ತಮ್ಮ ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಬಡ ಮಹಿಳೆಗೆ ಬಾಣಂತಿ ರೇಷನ್ ಕಿಟ್ ನೀಡಿ ತಾಯಿ-ಮಗುವಿಗೆ ಶುಭ ಹಾರೈಸಿದರು.
ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ತಜ್ಞವೈದ್ಯರು ಇಲ್ಲದ ಕಾರಣ ಸ್ಟಾಫ್ ನರ್ಸ್ ಆಗಿರುವ ನಸೀಮಾ ಸಿಸ್ಟರ್, ಸಾವಂತ ಹಾಗೂ ಸಿಬ್ಬಂದಿ ಇಲ್ಲಿ ಬರುವ ಬಡ ಮಹಿಳೆಯರಿಗೆ ಉತ್ತಮ ಚಿಕಿತ್ಸೆ ಮತ್ತು ಆರೈಕೆ ನೀಡುತ್ತಿದ್ದು, ಇದನ್ನರಿತು ಇವರ ಸೇವೆಯನ್ನು ಮೆಚ್ಚಿ ತಾಜುದ್ದೀನ ಕಿಂಡ್ರೀ ಅವರನ್ನೂ ಗೌರವಿಸಿ ಸನ್ಮಾನಿಸಿ, ಅವರ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಎ.ಡಿ. ಮುಜಾವರ, ಹೈದರಅಲಿ ಖವಾಸ, ಮುನ್ನಾ ಢಾಲಾಯತ, ದಾವೂದ ಜಮಾಲ್, ಖಲಂದರ ಗಾಡಿ, ದಾವಲಸಾಬ ಲಕ್ಷ್ಮೇಶ್ವರ, ಇಸಾಕಲಿ ಹೊಸಮನಿ, ಮಾಬುಲಿ ದುರ್ಗಿಗುಡಿ, ಮೆಹಬೂಬ ಕುರ್ತಕೋಟಿ, ನಜೀರ ಢಾಲಾಯತ, ಇಬ್ರಾಹೀಮ ದುರ್ಗಿಗುಡಿ, ಮುಹಮ್ಮದ ಮುಂತಾದವರಿದ್ದರು.