ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರ ವಿತರಣೆ

0
Distribution of special uniforms to students
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಶಾಲಾ ಮಕ್ಕಳಲ್ಲಿ ಬಡವ-ಬಲ್ಲಿದ ಎಂಬ ಭಾವನೆ ದೂರ ಮಾಡಿ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯನ್ನುಂಟುಮಾಡುವಲ್ಲಿ ಸಮವಸ್ತ್ರದ ಪಾತ್ರ ಮುಖ್ಯವಾಗಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಖಂಡು ಅಭಿಪ್ರಾಯಪಟ್ಟರು.

Advertisement

ಇಲ್ಲಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಶಾಲೆಗೆ ಸೇರುವ ಮಗುವಿನ ಮನಸ್ಸು ಸೂಕ್ಷ್ಮವಾಗಿರುತ್ತದೆ. ಅದನ್ನು ಅರಿತು ಮಕ್ಕಳಿಗೆ ಉತ್ತಮ ಕಲಿಕಾ ವಾತವಾರಣ ಒದಗಿಸಲು ಶಿಕ್ಷಕಕರು ಮತ್ತು ಪಾಲಕರು ಮುಂದಾಗಬೇಕು. ಖಾಸಗಿ ಶಾಲೆಗಳ ವ್ಯಾಮೋಹ ತ್ಯಜಿಸಿ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪಾಲಕರ ಅಗತ್ಯ ನೆರವಿನಿಂದ ಆಕರ್ಷಕ ಸಮವಸ್ತ್ರ ನೀಡಲು ಸಾಧ್ಯವಾಯಿತು ಎಂದರು.

ಪ್ರಧಾನ ಗುರು ಎಸ್.ಎಸ್. ಕಂಬಳಿ ಮಾತನಾಡಿ, ಶೈಕ್ಷಣಿಕ ಬಲವರ್ಧನೆಯ ಜೊತೆಗೆ ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಶಾಲಾ ಮಕ್ಕಳಲ್ಲಿ ಸಮಾನತೆ ಮತ್ತು ಶಿಸ್ತು ಮೂಡಿಸಲು ಶಾಲಾ ಎಸ್.ಡಿ.ಎಂ.ಸಿ ಸಮಿತಿಯ ಅಧ್ಯಕ್ಷರು, ಪಾಲಕರ ಮತ್ತು ಶಿಕ್ಷಕರ ಸಹಕಾರದಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿರುವುದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಗ್ರಾ.ಪಂ ಸದಸ್ಯೆ ರಜೀಯಾಬೇಗಂ ತಹಸೀಲ್ದಾರ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸಿದ್ದಮ್ಮ ಸಜ್ಜನರ, ಸದಸ್ಯರಾದ ಚಂದ್ರಶೇಖರ ಬಣವಿ, ಚನ್ನಪ್ಪ ಯಲಿಶಿರುಂಜ, ಸಂಗಪ್ಪ ಹಡಪದ ಯಶೋಧಾ ಹುದ್ದಾರ, ರೇಣುಕಾ ಹಿರೇಹಾಳ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here