ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಂಗಿಮಡಿಯ ಅಬುಹುರೇರಾ ಮಸ್ಜಿದ್ ಆವರಣದಲ್ಲಿ ಕಾರ್ಪೆಂಟರ್ ಸಂಘದ ಕ್ರಿಕೆಟ್ ಆಟಗಾರರಿಗೆ ಎಮ್.ಜಿ. ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಪೆಂಟರ್ ಸಂಘದ ಎಲ್ಲ ಕ್ರಿಕೆಟ್ ಆಟಗಾರರು ಸಮವಸ್ತç ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
Advertisement
ಎಮ್.ಜಿ. ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮಕ್ತುಮಸಾಬ ನಾಯಕ್ ಅವರಿಗೆ ಇತ್ತೀಚೆಗೆ `ನವ ಭಾರತ ಉದಯ ಪ್ರತಿಷ್ಠಾನ’ ಬೆಂಗಳೂರು ಇವರು ಕೊಡಮಾಡುವ `ಕನ್ನಡ ಕಣ್ಮಣಿ’ ಪ್ರಶಸ್ತಿ ದೊರೆತ ಹಿನ್ನೆಲೆ ಹಾಗೂ ಟ್ರಸ್ಟ್ನ ಸಂಯೋಜಕ ಸುಲೇಮಾನ್ ಕಿಲ್ಲೆದಾರರಿಗೆ ಮೌಲಾನಾ ಅಬ್ದುಲ್ ಗಫುರ ಆಲೂಮ್ನಿ ಸಂಘದ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಲೂಮ್ನಿ ಅಸೋಸಿಯೆಷನ್‌ನ ಸರ್ವ ಸದಸ್ಯರು, ಕಾರ್ಪೆಂಟರ್ ಸಂಘದ ಸರ್ವ ಸದಸ್ಯರು, ಅಬುಹುರೇರಾ ಮಸ್ಜಿದ್‌ನ ಹಿರಿಯರು ಪಾಲ್ಗೊಂಡಿದ್ದರು.