ಸಾಧಕ ಗಣ್ಯರಿಗೆ ಜಿಲ್ಲಾಡಳಿತದಿಂದ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

Advertisement

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಕಲೆ, ಸಾಹಿತ್ಯ, ರಂಗಭೂಮಿ, ಸಮಾಜ ಸೇವೆ: 2024ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಶಿರಹಟ್ಟಿ ದೇವಿಹಾಳದ ವೇಷಗಾರ ಡಾ.ಗೋವಿಂದಪ್ಪ ರಾಮಚಂದ್ರಪ್ಪ, 2023ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಲಕ್ಕುಂಡಿಯ ಬಸವರಾಜ ನೀಲಪ್ಪ ಹಡಗಲಿ, 2023ನೇ ಸಾಲಿನ ಕರ್ನಾಟಕ ಲಲಿತಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪಡೆದಿದ್ದಕ್ಕಾಗಿ ಮುಳಗುಂದದ ಬಸವರಾಜ ಕುತ್ನಿ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಯಬಲಿ ಅ.ಹೊಂಬಳ, 2024ನೇ ಸಾಲಿನ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಪೂಜಾ ಮಲ್ಲಪ್ಪ ಬೇವೂರ, ಆಕಾಶವಾಣಿಯ ಎ ಶ್ರೇಣಿಯ ಕಲಾವಿದ ಡಾ. ಎಚ್.ಬಿ. ಹೂಗಾರ, ಪ್ರಾಮಾಣಿಕತೆ ಮೆರೆದಿದ್ದಕ್ಕಾಗಿ ಗದಗನ ಸೈಯದ್ ಹುಸೇನ ಹೊಂಬಳ, ಪ್ರಾಚ್ಯಾವಶೇಷಗಳನ್ನು ಸಚಿವರಿಗೆ ಹಸ್ತಾಂತರಸಿದ್ದಕ್ಕಾಗಿ ಲಕ್ಕುಂಡಿಯ ಬಸಪ್ಪ ಬಡಿಗೇರ, ಲಕ್ಕುಂಡಿ ಪ್ರಾಚ್ಯಾವಷೇಷಗಳ ಅನ್ವೇಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಪೀರಸಾಬ ನದಾಫ್ ಇವರನ್ನು ಗೌರವಿಸಲಾಯಿತು.

ಆಡಳಿತ, ಆರೋಗ್ಯ, ಕೃಷಿ, ಅರಣ್ಯ, ಕೈಮಗ್ಗ: ಗದಗ ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ. ಪ್ರಕಾಶ ಸಿದ್ಧಪ್ಪ ಜಟ್ಟೆಣ್ಣವರ, ಬೆಟಗೇರಿಯ ಬುದ್ಧಿಮಾಂದ್ಯರ ಶಾಲೆಯ ಮಂಜುನಾಥ ಸುರೇಶ ಮಾಲೂರ, ಯಲ್ಲಪ್ಪ ಕಾಂಬ್ಳೇಕರ್, ಗಜೇಂದ್ರಗಡದ ತೇಜಪ್ಪ ವೆಂಕಟೇಶಪ್ಪ ಚಿನ್ನೂರ, ಡಾ. ಪ್ರದೀಪ ಶಿವಮೂರ್ತೆಪ್ಪ ಉಗಲಾಟ, ಮ್ಯಾಕಲಜರಿಯ ಅಂದಪ್ಪ ಕಾಂತಪ್ಪ ಅಂಗಡಿ, ಸ್ವಚ್ಛತೆ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ನರಗುಂದ ಪುರಸಭೆ ಮುಖ್ಯಾಧಿಕಾರಿ, ನ್ಯಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥ ಡಾ. ರಾಜು ಜಿ.ಎಂ, ಎಲುವು-ಕೀಲು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ. ಮಹಾಂತೇಶ ಪಾಟೀಲ, ಶರೀರ ಕ್ರಿಯಾಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಸಮತಾ ಪದಕಿ, ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಬಸಪ್ಪ ಮೌಳಿ, ಜಯಶ್ರೀ ಚೌದ್ರಿ ಇವರನ್ನು ಸನ್ಮಾನಿಸಲಾಯಿತು.

ಶಿಕ್ಷಣ, ಕ್ರೀಡೆ: 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿಜಯಲಕ್ಷ್ಮೀ ಗೊನಬಾಳ, 2024-25ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನವತಿಕ ಬಿ.ಹಜಾರಿ, 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾವ್ಯ ಹಿರೇಗೌಡರ, ಏಪ್ರಿಲ್ 2025ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ದಿದ್ದಕ್ಕಾಗಿ ಸುಶೀಲಾ ಶಿವಾನಂದ ಯಲಿಗಾರ, ಅಂತಾರಾಷ್ಟ್ರೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡ ರಕ್ಷಿತಾ ಚುರ್ಚಿಹಾಳ, ಪ್ರಾಚ್ಯ ಪ್ರಜ್ಞೆ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉಮೆಶ ಪೂಜಾರಿ, ಎನ್.ಎಸ್.ಎಸ್ ವಿಭಾಗದಲ್ಲಿ 2023-24ನೇ ಸಾಲಿನ ಡಾ. ಡಿ.ಸಿ. ಪಾವಟೆ ಪ್ರಶಸ್ತಿ ಪಡೆದ ಮನೋಜ್ ಎಚ್.ದಲಬಂಜನ, ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ನಿಖಿಲರಡ್ಡಿ ನಿಂಗರಡ್ಡಿ ತೇರಿನಗಡ್ಡಿ, ಇಂಟರ್ ವಿಶ್ವವಿದ್ಯಾಲಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ವೈಷ್ಣವ ಕಲಕಂಬಿ, ರಾಷ್ಟ್ರಮಟ್ಟದ ಕ್ರಾಸ್ ಕಂಟ್ರಿಯಲ್ಲಿ ಪಾಲ್ಗೊಂಡ ದೇವರಾಜ ಕಲ್ಲಪ್ಪ ದೊಡಮನಿ, 21ನೇ ರಾಷ್ಟ್ರ ಮಟ್ಟದ ಎಂಟಿಬಿ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಲಮಾಣಿ, ಸೌಂದರ್ಯ ಅಂತಾಪೂರ, ರಾಷ್ಟç ಮಟ್ಟದ ರೋಡ್ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಸಾಗರ ಹೊಳೆಪ್ಪಗೋಳ, ಸೌಥ್‌ಝೋನ್ ಜುಡೋ ಚಾಂಪಿಯನ್‌ಶಿಪ್ 2025ರಲ್ಲಿ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಸಮರ್ಥ ತಾಳಿ ಇವರನ್ನು ಗೌರವಿಸಲಾಯಿತು.

ಪತ್ರಿಕೋದ್ಯಮ, ಟಿ.ವಿ ಮಾಧ್ಯಮ

ಮಾದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸುರೇಶ ಕಡ್ಲಿಮಟ್ಟಿ, ಚಕ್ರವರ್ತಿ ದಿನಪತ್ರಿಕೆಯ ಸಂಪಾದಕ ನಾಗೋಸಾ ಭಾಂಡಗೆ, ವಿಜಯ ಕರ್ನಾಟಕದ ವರದಿಗಾರ ರುದ್ರಗೌಡ ಪಾಟೀಲ, ಪವರ್ ಟಿವಿಯ ಜಿಲ್ಲಾ ವರದಿಗಾರ ಆನಂದಯ್ಯ ವಿರಕ್ತಮಠ, ಕನ್ನಡಪ್ರಭ ರೋಣ ತಾಲೂಕು ವರದಿಗಾರ ಪಿ.ಎಸ್. ಪಾಟೀಲ, ವಿಜಯವಾಣಿ ನರೇಗಲ್ ಹೋಬಳಿ ವರದಿಗಾರ ಪ್ರಭುಸ್ವಾಮಿ ಅರವಟಿಮಠ, ಸಂಯುಕ್ತ ಕರ್ನಾಟಕದ ಲಕ್ಷ್ಮೇಶ್ವರ ವರದಿಗಾರ ದಿಗಂಬರ ಪೂಜಾರ, ವಿಜಯ ಕರ್ನಾಟಕದ ಮುಂಡರಗಿ ವರದಿಗಾರ ಸಿ.ಕೆ. ಗಣಪ್ಪನವರ, ಕಿತ್ತೂರು ಕರ್ನಾಟಕದ ನರಗುಂದ ವರದಿಗಾರ ಪ್ರಭು ಗುಡಾರದ, ವಿಜಯವಾಣಿ ಮುಳಗುಂದ ಹೋಬಳಿ ವರದಿಗಾರ ಎಮ್.ಎಮ್. ಜಮಾಲಸಾಬನವರ ಇವರನ್ನು ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here