HomeGadag Newsನಾಳೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ

ನಾಳೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ವಕೀಲರ ಸಂಘದ ಸನ್ 2025-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ರಾಜಶೇಖರ್ ಗಂಗಪ್ಪ ಕಲ್ಲೂರ್, ಉಪಾಧ್ಯಕ್ಷರಾಗಿ ಮುದಕಪ್ಪ ಅಂದಪ್ಪ ಸಂಗನಾಳ, ಪ್ರಧಾನ ಕಾರ್ಯದರ್ಶಿಗಳಾಗಿ ಮಹಾಂತೇಶ ಅಯ್ಯಪ್ಪ ನಾಯ್ಕರ್, ಸಹ ಕಾರ್ಯದರ್ಶಿಗಳಾಗಿ ಚನ್ನಾರೆಡ್ಡಿ ಬಸವರಾಜ ಗೂಳರೆಡ್ಡಿ, ಖಜಾಂಚಿಯಾಗಿ ಶೈಲಜಾ ಬಸಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.

ಸಂಫದ ನೂತನ ಚುನಾಯಿತ ಪದಾಧಿಕಾರಿಗಳ ಪ್ರಮಾಣಪತ್ರ ವಿತರಣೆ, ಪ್ರಮಾಣ ವಚನ ಸ್ವೀಕಾರ ಹಾಗೂ ಪದಗ್ರಹಣ ಸಮಾರಂಭವನ್ನು ಎಪ್ರಿಲ್ 29ರಂದು ಸಾಯಂಕಾಲ 5.30ಕ್ಕೆ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಸಂಘದ ಸರ್ವ ಸದಸ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಚುನಾವಣಾ ಅಧಿಕಾರಿಗಳಾದ ಎಮ್.ಎ. ಬಿಜಾಪೂರ ವಿನಂತಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!