ವಿಜಯಸಾಕ್ಷಿ ಸುದ್ದಿ, ಗದಗ : ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂ ಹಾಗೂ ಡೀಸೆಲ್ ಪ್ರತಿ ಲಿಟರ್‌ಗೆ 3.50 ರೂ ಏರಿಸಿದ ರಾಜ್ಯ ಸರ್ಕಾರದ ನಡೆ ಖಂಡಿಸಿ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ನೇತೃತ್ವದಲ್ಲಿ ನಗರದ ಜನರಲ್ ಕಾರ್ಯಪ್ಪ (ಹಳೆ ಡಿಸಿ ಕಚೇರಿ) ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಮ್ಮ ಗ್ಯಾರಂಟಿಗಳನ್ನು ಪೂರೈಸಲು ಎಲ್ಲ ಅಗತ್ಯ ವಸ್ತುಗಳ ವಿಶೇಷವಾಗಿ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಸುವ ಮೂಲಕ ಕರ್ನಾಟಕದ ಜನತೆಗೆ ಮೋಸ ಮಾಡುತ್ತಿದೆ. ನುಡಿದಂತೆ ನಡೆದ ಸರ್ಕಾರ ಎಂದು ಹೇಳುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜ್ಯದ ಹಿತ ಕಾಪಾಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸರ್ಕಾರದ ಸಚಿವರುಗಳೆಲ್ಲಾ ಬೆಲೆ ಏರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಮನಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇಂದು ಸಾಂಕೇತಿಕ ಪ್ರತಿಭಟನೆ ಕೈಗೊಂಡಿದ್ದು, ತೈಲ ಬೆಲೆ ಇಳಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಹಿರಿಯರಾದ ಎಂ.ಎಸ್. ಕರೀಗೌಡ್ರ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ರಾಜ್ಯದ ಹಿತ ಕಾಪಾಡುವುದನ್ನು ಬಿಟ್ಟು ತಮ್ಮ ಖುರ್ಚಿಯನ್ನು ಭದ್ರಗೊಳಿಸುವಲ್ಲಿ ನಿರತರಾಗಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿಯೆಡೆಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ, ರವಿ ಕರಿಗಾರ, ನಿಂಗಪ್ಪ ಮಣ್ಣೂರ, ಮುತ್ತು ಕಡಗದ, ಕಾಂತೀಲಾಲ ಬನ್ಸಾಲಿ, ಸಂಗಮೇಶ ದುಂದೂರ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ನಾಗರಾಜ ಕುಲಕರ್ಣಿ, ಶ್ರೀಪತಿ ಉಡುಪಿ, ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ರಮೇಶ ಹತ್ತಿಕಾಳ, ವಿ.ಕೆ. ಗುರುಮಠ, ಸಂತೋಷ ಅಕ್ಕಿ, ಬೂದಪ್ಪ ಹಳ್ಳಿ, ಭದ್ರೇಶ ಕುಸ್ಲಾಪೂರ, ಗಂಗಾಧರ ಹಬೀಬ, ಕಿಷನ್ ಮೇರವಾಡೆ, ರಾಘವೇಂದ್ರ ಯಳವತ್ತಿ, ಸುರೇಶ ಚಿತ್ತರಗಿ, ಈರ್ಷಾ ಮಾನ್ವಿ, ರವಿ ದಂಡಿನ, ಬಸವರಾಜ ಸಂಗನಾಳ, ಅಶೋಕ ಕರೂರ, ವಾಯ್.ಪಿ. ಅಡ್ನೂರ, ಮಂಜುನಾಥ ಹಳ್ಳೂರಮಠ, ನಾಗರಾಜ ತಳವಾರ, ಚಂದ್ರು ತಡಸದ, ಪ್ರಕಾಶ ಅಂಗಡಿ, ಲಕ್ಷ್ಮಿ ಶಂಕರ ಕಾಕಿ, ಮಹೇಶ ದಾಸರ, ಮಂಜುನಾಥ ತಳವಾರ, ಮಹಾದೇವಪ್ಪ ಚಿಂಚಲಿ, ನಾಗರಾಜ ಮದ್ನೂರ, ಶೇಖಣ್ಣ ಕಟ್ಟಿಮನಿ, ಮುತ್ತು ಮೂಲಿಮನಿ, ರವಿ ವಗ್ಗನವರ, ಶಶಿಧರ ದಿಂಡೂರ, ಹನಮಂತಪ್ಪ ದಿಂಡೆಣ್ಣವರ, ಸಿದ್ದಪ್ಪ ಈರಗಾರ, ಮಾಧುಸಾ ಮೇರವಾಡೆ, ಶಿವು ಹಿರೇಮನಿಪಾಟೀಲ, ಅಶ್ವಿನಿ ಜಗತಾಪ, ಪದ್ಮಿನಿ ಮುತ್ತಲದಿನ್ನಿ, ಕಮಲಾಕ್ಷಿ ಬಳಿಶೆಟ್ಟರ, ರೇಖಾ ಬಂಗಾರಶೆಟ್ಟರ, ಯೋಗೇಶ್ವರಿ ಭಾವಿಕಟ್ಟಿ, ವಿಜಯಲಕ್ಷ್ಮಿ ಮಾನ್ವಿ, ಶಕ್ತಿ ಕತ್ತಿ, ಸಂತೋಷ ಜಾವೂರ, ಕಮಲಾಕ್ಷೀ ಗೊಂದಿ, ಮಂಜುನಾಥ ಮುಳಗುಂದ, ಕುಮಾರ ಮಾರನಬಸರಿ, ವೆಂಕಟೇಶ ಹಬೀಬ, ಶಿವು ಗೊಟೂರ, ಕೃಷ್ಣಾ ಚಿಂತಾ, ರಾಹುಲ ಸಂಕಣ್ಣವರ, ನಾಗರಾಜ ಖೋಡೆ, ಸುರೇಶ ಹೆಬಸೂರ, ಪ್ರಕಾಶ, ರಾಜಶೇಖರ ಪಾಟೀಲ, ಮಹದೇವಪ್ಪ ಹಡಪದ, ವಿಶ್ವನಾಥ ಶಿರಿಗಣ್ಣವರ, ಅರವಿಂದ ಹುಲ್ಲೂರ, ಪ್ರಕಾಶ ಕೊತಂಬರಿ, ರತ್ನಾ ಕುರಗೊಡ, ಕಾರ್ತಿಕ ಮುತ್ತಿನಪೆಂಡಿಮಠ, ಗುರುಶಾಂತಗೌಡ ಮರೀಗೌಡ್ರ, ಕಸ್ತೂರಿ ಕಮ್ಮಾರ, ವಿನೋದ ಹಂಸನೂರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ಕಾಂಗ್ರೆಸ್‌ನ ಪೊಳ್ಳು, ಸುಳ್ಳು ಗ್ಯಾರಂಟಿಗಳನ್ನು ಪೂರೈಸಲು ರಾಜ್ಯದ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಮತಿಹೀನ ಸರ್ಕಾರ ನಮ್ಮ ರಾಜ್ಯವನ್ನಾಳುತ್ತಿದೆ. ತಮ್ಮ ಅಧಿಕಾರದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಮನಬಂದಂತೆ ಏರಿಕೆ ಮಾಡುತ್ತಿದೆ. ಮುಂದೆ ಈ ಕೆಟ್ಟ ಸರ್ಕಾರದ ನೀತಿ ನಿಯಮಗಳ ಬಗ್ಗೆ ಸತ್ಯಾಂಶವನ್ನು ಹೊರ ಹಾಕಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರಂತರ ಕಾರ್ಯ ಮಾಡುತ್ತೇವೆ ಎಂದರು.