ಕೊಪ್ಪಳ:- ಜಿಲ್ಲಾಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. 45 ವರ್ಷದ ಶ್ರೀಕಾಂತ ಶವ ಪತ್ತೆಯಾಗಿದ್ದು, ಅತಿಯಾಗಿ ಮದ್ಯ ಸೇವಿಸಿ ಮಲಗಿದ್ದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
Advertisement
ಕಾಳಿದಾಸನಗರದಲ್ಲಿ ಘಟನೆ ನಡೆದಿದೆ. ಕಳೆದ 7 ವರ್ಷಗಳಿಂದ ಶ್ರೀಕಾಂತ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮದ್ಯ ವ್ಯಸನಿಯಾಗಿದ್ದರು ಎಂಬ ಮಾಹಿತಿಯಿದೆ. ಕಳೆದ 4 ದಿನಗಳಿಂದ ಬಾಡಿಗೆ ಮನೆಯ ಬಾಗಿಲು ತೆಗೆದಿರಲಿಲ್ಲ. ದುರ್ವಾಸನೆ ಬರುತ್ತಿದ್ದರಿಂದ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ಶ್ರೀಕಾಂತ ಕುಟುಂಬದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


