ವಿಜಯಸಾಕ್ಷಿ ಸುದ್ದಿ, ಮುಂಡರಗಿ: ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಜಿಲ್ಲಾಮಟ್ಟದ ರೈತ ಸಮಾವೇಶ ಜರುಗಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೇಮಯ್ಯ ಜಂಗರ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಡಾ. ವಾಸುದೇವ ಮೇಟಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ನಟರಾಜ ಸವಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ರೈತ ಹೋರಾಟಗಾರ ಚಂದ್ರಹಾಸ ಉಳ್ಳಾಗಡ್ಡಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರೈತ ಮುಖಂಡರುಗಳಾದ ತಿಮ್ಮರಡ್ಡೆಪ್ಪ ಮೇಟಿ, ಎಂ.ಕೆ. ಮುಲ್ಲಾ, ಡಿ.ಎ. ಕೆಂಚನಗೌಡ, ಶಂಕ್ರಪ್ಪ ತಳವಾರ, ಈರಪ್ಪ ಸಿದ್ನೆಕೊಪ್ಪ, ಜಿಲ್ಲಾಧ್ಯಕ್ಷರಾದ ಫಕೀರಪ್ಪ ಪೂಜಾರ, ಎಂ.ಡಿ. ಕಾಲೇಬಾಗ್, ಲಕ್ಷ್ಮಕಾಂತ್ ಇ.ಎನ್, ಕಾರ್ಯಾಧ್ಯಕ್ಷ ಓಂಕಾರಪ್ಪ ಸಿ, ಉಪಾಧ್ಯಕ್ಷ ವೆಂಕಟೇಶ ಬಿ, ಮಲ್ಲಿಕಾರ್ಜುನ ಹಿರೇಮಠ, ನಾಗವೇಣಿ ಕುಡುಪಲಿ, ಮೋಹನ ಇಮರಾಪೂರ, ರೇಖಾ ಜಡಿ, ಉಮೇಶ ಮರ್ಚಪ್ಪನವರ, ಮಹಾರುದ್ರಯ್ಯ ಲಕ್ಕುಂಡಿ, ರುದ್ರಗೌಡ ಪಾಟೀಲ, ಮಂಜುಳಾ ಹಿರಿಯಪ್ಪನವರ, ವೀರೇಶ ಮಡಿವಾಳರ, ರೈಲ್ವೆ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನವಲಗುಂದ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೈತರು ಹಾಗೂ ರೈತ ಮಹಿಳೆಯರು ಸಂಘಕ್ಕೆ ಸೇರ್ಪಡೆಗೊಂಡರು. ಹಾರೋಗೇರಿ, ಮೇವುಂಡಿ, ವೆಂಕಟಾಪುರ, ಕದಾಂಪುರ, ತಾಮ್ರಗುಂಡಿ, ಡಂಬಳ, ಮುಂಡರಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.


