ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ನಡೆದ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಭಾಗವಹಿಸಿ ವಿಜೇತರಾಗಿದ್ದು, ಸಿಬ್ಬಂದಿಗಳಿಗೆ ಇಲಾಖೆಯ ಉಪನಿರ್ದೇಶಕರಾದ ಡಾ. ನಂದಾ ಹಣಬರಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಡಾ. ನಂದಾ ಹಣಬರಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಇವರ ಸ್ವರಚಿತ ನಾಟಕ ಗೌಡನ ಮಗಳು-ಪಾತ್ರದಾರಿಗಳು ನಂದಾ ಹಣಬರಟ್ಟಿ, ಸಿಬ್ಬಂದಿಗಳಾದ ಬಿ.ಎಸ್. ಗುಡಿ, ದೀಪಾ ಶೆಟ್ಟರ್, ಶ್ರೀಕಾಂತ, ವಸಂತಾ, ವಿದ್ಯಾ, ಸುಜಾತಾ, ರೋಹನ, ಪಾಪಣ್ಣವರ, ಧರ್ಮರಾಜ, ಪ್ರವೀಣ ಗಾಯಕರ, ಕಸ್ತೂರಿ ನರ್ತಿ ಇವರುಗಳು ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಡಾ. ನಂದಾ ಹಣಬರಟ್ಟಿ ಮತ್ತು ಇಲಾಖೆಯ ಸಿಬ್ಬಂದಿಗಳಾದ ಸುಜಾತಾ ಪಾಟೀಲ, ದೀಪಾ ಶೆಟ್ಟರ್, ಕಸ್ತೂರಿ ನರ್ತಿ, ಶ್ರೀಕಾಂತ ಅರಹುಣಸಿ, ಬಿ.ಎಸ್. ಗುಡಿ, ಮುತ್ತಣ್ಣ ಸಂಕನೂರ, ಎಂ.ಎಂ. ಪಾಪಣ್ಣವರ ಇವರುಗಳು ಜಾನಪದ ಸಮೂಹ ಗೀತೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶ್ರೀಕಾಂತ ಅರಹುಣಸಿ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ, ಸಿದ್ದಲಿಂಗೇಶ ಯಚ್ಚಲಗಾರ ಪುರುಷರ 800 ಮೀ ಓಟದಲ್ಲಿ ದ್ವಿತೀಯ, ಸಿದ್ಧಲಿಂಗೇಶ ಯಚ್ಚಲಗಾರ ಪುರುಷರ 100 ಮೀ ಓಟದಲ್ಲಿ ತೃತೀಯ, ಪ್ರಶಾಂತ ಸಂಗ್ರೇಶಿ ಪುರುಷರ 110 ಮೀ ಅಡೆತಡೆ ಓಟದಲ್ಲಿ ಪ್ರಥಮ, ಸಿದ್ದಪ್ಪ ಮಾದರ ಪುರುಷರ 64 ಕೆಜಿ ವೇಟ್ ಲಿಫ್ಟಿಂಗ್‌ದಲ್ಲಿ ದ್ವಿತೀಯ, ಮಂಜುನಾಥ ಮಾದರ ಪುರುಷರ 67 ಕೆಜಿ ಕುಸ್ತಿಯಲ್ಲಿ ದ್ವಿತೀಯ, ಶಿವಗಂಗವ್ವ ಕಬ್ಬೇರಹಳ್ಳಿ ಮಹಿಳೆಯರ 800 ಮೀ ಓಟದಲ್ಲಿ ತೃತೀಯ, ಮಾಬುಸಾಬ ಕರಣಿ ಪುರುಷರ 83 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ದ್ವಿತೀಯ, ಸದಾಶಿಬ ಬುದ್ನಿ ಪುರುಷರ 87 ಕೆಜಿ ಕುಸ್ತಿಯಲ್ಲಿ ಪ್ರಥಮ, ವಿಶಾಲ ಹಾದಿಮನಿ, ಬಿ.ವಿ. ಬಸವರೆಡ್ಡಿಯವರ, ನವೀನ ಕುಮಾರ ಹರಿಜನ, ಪ್ರಶಾಂತ ಸಂಗ್ರೇಶಿ, ನೀಲಕಂಠಯ್ಯ ಎಸ್, ಮಹಮ್ಮದರಫಿ ನದಾಫ್ ಅವರು ಪುರುಷರ ಫುಟ್ಬಾಲ್‌ನಲ್ಲಿ ಪ್ರಥಮ, ಬಿ.ವಿ. ಬಸವರೆಡ್ಡಿಯವರ ಪುರುಷರ ಬಾಸ್ಕೆಟ್ ಬಾಲ್‌ನಲ್ಲಿ ಪ್ರಥಮ, ಮಂಜುಳಾ ಅರಳಿಗಿಡದ ಮಹಿಳೆಯರ ಥ್ರೋಬಾಲ್‌ನಲ್ಲಿ ಪ್ರಥಮ, ರಾಘವೇಂದ್ರ ಗೋಕಾಕ್ ಪುರುಷರ ಹಾಕಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.



