ಏಡ್ಸ್ ಬಗ್ಗೆ ಸಮುದಾಯದಲ್ಲಿ ಜಾಗೃತಿ ಅವಶ್ಯ

0
District level marathon competition
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐ.ಎಮ್.ಎ, ರೋಟರಿ ಸೆಂಟ್ರಲ್ ಗದಗ, ಲಾಯನ್ಸ್ ಕ್ಲಬ್ ಗದಗ-ಬೆಟಗೇರಿ, ನೂರಾನಿ ಟ್ರಸ್ಟ್ ಗದಗ-ಬೆಟಗೇರಿ, ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ, ರಕ್ಷಣೆ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಚೈತನ್ಯ ಸಂಸ್ಥೆ, ನವಚೇತನ ಸಂಸ್ಥೆ, ಗದಗ ಜಿಲ್ಲೆಯ ಎನ್.ಎಸ್.ಎಸ್. ಘಟಕಗಳು ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2024ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Advertisement

ಮ್ಯಾರಥಾನ್ ಸ್ಪರ್ಧೆಯನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಜಿಲ್ಲೆಯಲ್ಲಿ ಹೆಚ್.ಐ.ವಿ. ಪ್ರಮಾಣ ಇಳಿಮುಖವಾಗಿದ್ದು, ವಿದ್ಯಾರ್ಥಿಗಳು ಹೆಚ್.ಐ.ವಿ ಏಡ್ಸ್ ಬಗ್ಗೆ ಮಾಹಿತಿ ತಿಳಿದುಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರೊ. ಎಸ್.ಬಿ. ಮಾಸನಾಯಕ ಮಾತನಾಡಿ, ವಿದ್ಯಾರ್ಥಿಗಳು ಯೌವನದಲ್ಲಿ ತಮ್ಮ ಜೀವನವನ್ನು ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು.

District level marathon competition

ಡಾ. ಅರುಂಧತಿ ಕುಲಕರ್ಣಿ ಮಾತನಾಡಿ, ಹೆಚ್.ಐ.ವಿ. ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಜಿಲ್ಲೆಯ ಯುವ ಸಮುದಾಯ ಜಾಗೃತಿಯನ್ನು ಮೂಡಿಸಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರಲು ಶ್ರಮಿಸಬೇಕೆಂದು ತಿಳಿಸಿದರು. ಮ್ಯಾರಥಾನ್ ನಡೆಸುವ ಉದ್ದೇಶ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ 1097, ಎಸ್,ಟಿ.ಐ. ಖಾಯಿಲೆಗಳು ಇತಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ ಎಂದು ಹೇಳಿದರು.

ಮ್ಯಾರಥಾನ್ ಜನಜಾಗೃತಿ ಕಾರ್ಯಕ್ರಮದಲ್ಲಿ ಐ.ಎಮ್.ಎ. ಗದಗ ಅಧ್ಯಕ್ಷರಾದ ಡಾ. ಜಿ.ಎಸ್. ಪಲ್ಲೇದ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಡಾ. ಆರ್.ಎನ್. ಗೋಡಬೋಲೆ, ರೋಟರಿ ಸೆಂಟ್ರಲ್ ಗದಗ ಅಧ್ಯಕ್ಷರಾದ ದಾನಪ್ಪಗೌಡರ, ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ನಿತೀಶ ಸಾಲಿ, ನೂರಾನಿ ಟ್ರಸ್ಟ್ ಪದಾಧಿಕಾರಿ ನುಮೇರ ನೂರಾನಿ, ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಪ್ರೊ. ಎಸ್.ಎಸ್. ಕೊಳ್ಳಿಯವರ, ಕ್ರೀಡಾ ಇಲಾಖೆ ತರಬೇತಿದಾರರಾದ ಮಂಜುನಾಥ ಬಾಗಡೆ, ವಿದ್ಯಾ ಕುಲಕರ್ಣಿ, ಗದಗ ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು, ಜಿಲ್ಲೆಯ ರೆಡ್‌ರಿಬ್ಬನ್ ಹಾಗೂ ಎನ್.ಎಸ್.ಎಸ್. ಅಧಿಕಾರಿಗಳು, ಆರೋಗ್ಯ ಇಲಾಖೆಯ ರೂಪಸೇನ್ ಚೌವ್ಹಾಣ, ಗೀತಾ ಕಾಂಬಳೆ, ಪುಷ್ಪಾ ಪಾಟೀಲ, ಸಿದ್ದಪ್ಪ ಲಿಂಗದಾಳ, ಬಸವರಾಜ ಹಿರೇಹಾಳ, ಗುರುರಾಜ ಕೋಟ್ಯಾಳ, ಜಿಲ್ಲೆಯ ಎಲ್ಲ ಐಸಿಟಿಸಿ, ಎ.ಆರ್.ಟಿ. ಡ್ಯಾಪ್ಕೂ ಸಿಬ್ಬಂದಿ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ, ರಕ್ಷಣೆ ಸಂಸ್ಥೆಯ ಹಜರತ್‌ಬಿ ಮತ್ತು ಸಿಬ್ಬಂದಿ, ಸೃಷ್ಟಿ ಸಂಸ್ಥೆಯ ಆದಿತ್ಯಾ ಮತ್ತು ಸಿಬ್ಬಂದಿ, ಚೈತನ್ಯ ಸಂಸ್ಥೆಯ ಸುನೀಲ್ ಮತ್ತು ಸಿಬ್ಬಂದಿ, ನವಚೇತನ ಸಂಸ್ಥೆಯ ಅಸ್ಲಂ ಮುಂತಾದವರು ಹಾಜರಿದ್ದರು.

ಪ್ರಾರಂಭದಲ್ಲಿ ಐ.ಸಿ.ಟಿ.ಸಿ. ಸಿಬ್ಬಂದಿ ಸ್ವಾಗತಿಸಿದರು. ಬಸವರಾಜ ಲಾಳಗಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸ್ಪರ್ಧೆಯಲ್ಲಿ ಪುರುಷರಲ್ಲಿ ಪ್ರಥಮ ಸ್ಥಾನ-ಈರಪ್ಪ ಲಕ್ಕುಂಡಿ, ದ್ವಿತೀಯ-ನಿಂಗಪ್ಪ ಕರಿಗಣ್ಣವರ, ತೃತೀಯ- ಸುದೀಪ ಖಾನಾಪೂರ ಪಡೆದುಕೊಂದಿದ್ದು, ಪರಶುರಾಮ ಹಿರೇಮನಿ, ವಿಜಯ ಬಿಸ್ನಳ್ಳಿ, ವಿಜಯಕುಮಾರ ಹಡಗಳಿ, ಮುತ್ತಪ್ಪ ನಾಯ್ಕರ ಈ ನಾಲ್ವರು ಸಮಾಧಾನಕರ ಪ್ರಶಸ್ತಿಗೆ ಭಾಜನರಾದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ, ಪ್ರಥಮ-ಭೂಮಿಕಾ ಪುಠಾಣಿ, ದ್ವಿತೀಯ-ಜ್ಯೋತಿ ಕಾಕುರಗೋಡ, ತೃತೀಯ-ಶೋಭಾ ತಂಬೂರಿ ಪಡೆದುಕೊಂಡಿದ್ದು, ಕನಕಾ ಎಸ್.ಜಿ., ವಿಜಯಲಕ್ಷ್ಮಿ ನಲವಡಿ, ಪೂಜಾ ಪೋತದಾರ, ಶಿಲ್ಪಾ ಕೊಂತಿಕಲ್ ಈ ನಾಲ್ವರು ಸಮಾಧಾನಕರ ಪ್ರಶಸ್ತಿಗೆ ಭಾಜನರಾದರು. ಗದಗ ಐ.ಎಮ್.ಎ. ಹಾಗೂ ನೂರಾನಿ ಟ್ರಸ್ಟ್ನಿಂದ ಮ್ಯಾರಥಾನ್‌ಗೆ 100 ಟಿ-ಶರ್ಟಗಳನ್ನು ಕೊಡುಗೆಯಾಗಿ ನೀಡಿದ್ದು ಮೆರಗು ತಂದಿತು.

ಹೆಚ್.ಐ.ವಿ. ಏಡ್ಸ್ ಮಾರಣಾಂತಿಕ ಖಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಯುಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಇಲಾಖೆ ಹಾಗೂ ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮ್ಯಾರಾಥಾನ ಸ್ಪರ್ಧೆ ಆಯೋಜಿಸಲಾಗಿದೆ.
– ಡಾ. ಅರುಂಧತಿ ಕುಲಕರ್ಣಿ
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು.


Spread the love

LEAVE A REPLY

Please enter your comment!
Please enter your name here