ಗದಗ:- ಗಣೇಶ ಚತುರ್ಥಿಯಂದು ಡಿಜೆ ಪಟಾಕಿ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಗದಗನಲ್ಲಿ ಮಾತಾನಾಡಿದ ಅವರು, ಗಣಪತಿ ಹಬ್ಬದಂದೇ ಯಾಕೆ ನಿಬಂಧನೆಗಳನ್ನು ಹಾಕ್ತಿರಿ.. ನಿಮಗ್ಯಾಕೆ ಹಿಂದೂ ಹಬ್ಬಗಳ ಮೇಲೆ ಕಣ್ಣು. ಯಾವುದೇ ಊರಲ್ಲಿ ಸಮಸ್ಯೆ ಇದ್ರೆ ಸ್ಥಳೀಯ ಆಡಳಿತಕ್ಕೆ ಬಿಡಿ. ಕಾನೂನು ಬಗ್ಗೆ ಶ್ರದ್ಧೆ ಇದ್ರೆ ಹಲವಾರು ತೀರ್ಪುಗಳನ್ನ ಪಾಲಿಸಿ. ರಾತ್ರಿ 9ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಧ್ವನಿ ವರ್ಧಕಗಳನ್ನ ಬಳಸುವಂತಿಲ್ಲ ಅಂದ್ರೆ ಇಲ್ಲಿ ನಿಮ್ಮ ಸೆಕ್ಯೂಲರ್ ಸತ್ತೋಗುತ್ತಾ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಗಣೇಶ ಉತ್ಸವಕ್ಕೆ ಬೇರೆಯವರೇ ಕಲ್ಲೊಡೆದಿದ್ದಾರೆ ಹೊರತು ಉತ್ಸವ ಮಾಡವರು ಹೊಡೆಯಲ್ಲ. ಹಿಂದೂಗಳು ಕಲ್ಲು ಒಡೆಯಲ್ಲ, ಪೆಟ್ರೋಲ್ ಬಾಂಬ್ ಹಾಕಲ್ಲ. ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಹಾಕಿದ್ದು ಎಸ್.ಡಿಪಿಐ. ಅವರನ್ನ ಒದ್ದು ಒಳಗ ಹಾಕಿಲ್ಲ ಇದು ಕೆಟ್ಟ ನೀತಿ. ಹೀಗಾಗಿ ಗಣೇಶ ಉತ್ಸವಕ್ಕೆ ಹೊರಡಿಸಿರೋ ಸೆರ್ಕ್ಯೂಲರ್ ಅನ್ನ ವಾಪಸ್ ತೆಗೆದುಕೊಳ್ಳಬೇಕು. ನೀವು ಹಿಂದೂಗಳಿದ್ರೂ ನಿಮ್ಮ ನೀತಿ ಹಿಂದೂ ಪರ ಇಲ್ಲ. ಹೆಚ್ ಕೆ ಪಾಟೀಲ್, ಸಿದ್ರಾಮಯ್ಯ, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಹಿಂದೂಗಳು ಅಲ್ಲ ಅಂತ ನಾ ಹೇಗೆ ಹೇಳಲಿ. ನೀವೆಲ್ಲ ಹಿಂದೂಗಳು ಅಲ್ಲ ಅಂತ ನಾವು ಹೇಳಲ್ಲ ಆದ್ರೆ ನಿಮ್ಮ ರಾಜಕೀಯಕ್ಕೋಸ್ಕರ ಸ್ವಾರ್ಥಿಗಳು ಆಗಿದ್ದೀರಿ ಎಂದು ಹರಿಹಾಯ್ದಿದ್ದಾರೆ.
ಇನ್ನೂ ಇದೇ ವೇಳೆ ದಸಾರ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆಗೆ ವಿರೋಧ ವಿಚಾರವಾಗಿ ಮಾತನಾಡಿ, ಚಾಮುಂಡಿ ಮೇಲೆ ನಂಬಿಕೆ ಭಕ್ತಿ ಇದ್ರೆ ಬಾನು ಮುಸ್ತಾಕ್ ಉದ್ಘಾಟನೆ ಮಾಡ್ತಾರೆ. ಈ ಬಗ್ಗೆ ನಾನು ಏನೂ ಕಮೆಂಟ್ ಮಾಡಲ್ಲ. ದೇವನೊಬ್ಬ ನಾಮ ಹಲವು ಅನ್ನೋ ದರ್ಶನವನ್ನ ಭಾರತೀಯರು ಜಗತ್ತಿಗೆ ಕೊಟ್ಟಿದ್ದಾರೆ. ಇಸ್ಲಾಂ ಅಲ್ಲಾ ಮಾತ್ರ ದೇವರು ಅಂತಾ ಹೇಳುತ್ತೆ. ಬಾನು ವರಿಗೆ ನಂಬಿಕೆ ಇದ್ದಲ್ಲಿ ದಸರಾ ಉದ್ಘಾಟನೆ ಮಾಡ್ತಾರೆ ಎಂದರು.